ಎಚ್​ಡಿಕೆ ಮತ್ತೊಮ್ಮೆ ಸಿಎಂ! ನಿಖಿಲ್​ಗೆ ಗಂಡು ಮಗು ಯೋಗ: ಅವಧೂತ ವಿನಯ್ ಗುರೂಜಿ ಭವಿಷ್ಯ

hdk
Published on

ಬೆಂಗಳೂರು: 'ನಿಮಗೆ ಮತ್ತೊಮ್ಮೆ ರಾಜ್ಯದ ದೊರೆಯಾಗುವ ಯೋಗವಿದೆ. ಜನವರಿ ನಂತರ ಎಲ್ಲವೂ ಒಳ್ಳೆಯದಾಗಲಿದೆ' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅವಧೂತ ವಿನಯ್ ಗುರೂಜಿ ಭವಿಷ್ಯ ಹೇಳಿದ್ದಾರೆ.

ಗುರೂಜಿ ಟಿ.ಎ ಶರವಣ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಕುಮಾರಸ್ವಾಮಿಗೆ ಈ ಭವಿಷ್ಯ ಹೇಳಿದ್ದಾರೆ. ರಾಜ್ಯದಲ್ಲಿ ಜೆಡಿಎಸ್​ಗೆ ಒಳ್ಳೆಯ ಕಾಲ ಬರಲಿದೆ. ಜತೆಗೆ ನಿಖಿಲ್ ಕುಮಾರಸ್ವಾಮಿಗೆ ಉತ್ತಮ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಶಾಸಕರಾಗುತ್ತಾರೆ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ನಿಖಿಲ್​ಗೆ ಗಂಡು ಮಗುವಿನ ಯೋಗವಿದೆ ಎಂದು ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ. ವಿನಯ್ ಗುರೂಜಿ ಮಾತು ಕೇಳಿ ಕುಮಾರಸ್ವಾಮಿ ಖುಷಿಯಾಗಿದ್ದಾರೆ.

ವಿನಯ್ ಗುರೂಜಿ ಸ್ಪಷ್ಟೀಕರಣ

ಇದಾದ ಕೆಲವೇ ಗಂಟೆಗಳಲ್ಲಿ ವಿನಯ್ ಗುರೂಜಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಮನೆಗೆ ವಿನಯ್ ಗುರೂಜಿ ಅವರು ಸೌಜನ್ಯಯುತ ಭೇಟಿ ನೀಡಿ, ಆಶೀರ್ವದಿಸಿದ್ದ ಸಂದರ್ಭದಲ್ಲಿ, ಅಲ್ಲಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಆಗಮಿಸಿದ್ದರು. ಆಗ ಅವರ ಯೋಗಕ್ಷೇಮದ ಕುರಿತು ಮಾತನಾಡಲಾಯಿತೇ ಹೊರತು ಮುಂದಿನ ರಾಜಕೀಯ ಭವಿಷ್ಯ ಅಥವಾ ಕುಮಾರಸ್ವಾಮಿ ಅವರ ಕೌಟುಂಬಿಕ ವಿಚಾರಗಳ ಕುರಿತು ಪ್ರಸ್ತಾಪವಾಗಿಲ್ಲ ಎಂಬುದಾಗಿ ವಿನಯ್ ಗುರೂಜಿ ಅವರ ಕಚೇರಿಯಿಂದ ಸ್ಪಷ್ಟೀಕರಣ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net