ಜೇನುತುಪ್ಪದ ಬಾಟಲಿಗೆ ವಿಷದ ಚಿತ್ರ ಅಂಟಿಸಿದಂತೆ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಿದ್ದರು...

vsy hdd devegowda
Published on

ರಾಯಚೂರು: ಜೇನುತುಪ್ಪ ತುಂಬಿದ ಬಾಟಲಿಯಲ್ಲಿ ಕಿಡಿಗೇಡಿಗಳು ವಿಷದ ಬಾಟಲಿಯ ಚಿತ್ರ ಅಂಟಿಸಿದಂತೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿತ್ತು ಎಂದು ಜೆಡಿಎಸ್​ನ ಮಾಜಿ ಶಾಸಕ ವೈಎಸ್​ವಿ ದತ್ತಾ ಹೇಳಿದರು.

ದೇವದುರ್ಗದಲ್ಲಿ ಬುಧವಾರ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ವೈಎಸ್​ವಿ ದತ್ತಾ, ಉತ್ತಮ ಕೆಲಸ ಮಾಡಿದ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿತ್ತು. ಆದರೆ ದೇವದುರ್ಗದ ರೈತನೊಬ್ಬ ದೇವೇಗೌಡರ ಪ್ರತಿಮೆ ನಿರ್ಮಿಸಿದ್ದಾರೆ. ಇಂದು ಈ ನೆಲದಲ್ಲಿ ಜೆಡಿಎಸ್​ ಸಮಾವೇಶ ನಡೆದಿದೆ. ದೇವೇಗೌಡರಿಗೆ ಅಂಟಿದ್ದ ಆ ಪಟ್ಟವನ್ನು ಈ ಸಮಾವೇಶದ ಮೂಲಕ ತೆಗೆದು ಹಾಕಿದಂತಾಗಿದೆ ಎಂದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ದೇವೇಗೌಡರು ಜಿಲ್ಲೆಗೆ ಎನ್‍ಆರಬಿಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ಎಂಬಾತ ದೇವೇಗೌಡರ ಪ್ರತಿಮೆ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಆ ರೈತನ ಅಭಿಮಾನವೇ ಇಂದಿನ ಸಮಾವೇಶಕ್ಕೆ ಕಾರಣ ಎಂದು ವೈಎಸ್​ವಿ ದತ್ತಾ ಹೇಳಿದರು.

ಎಚ್​.ಡಿ.ದೇವೇಗೌಡ ಮಾತನಾಡಿ, ಇಂದಿನ ರಾಜಕೀಯ ಅವ್ಯವಸ್ಥೆಯಲ್ಲಿದೆ. ನನ್ನಲ್ಲಿಂದ ಬೆಳೆದವರೇ ಈ ಪಕ್ಷವನ್ನೇ ಸರ್ವನಾಶ ಮಾಡುತ್ತೇನೆ ಎಂದು ಹೇಳುತ್ತಾರೆ. ಕೆಲವರಲ್ಲಿ ಇಂಥ ಮಾತುಗಳನ್ನು ಹೇಳುವ ಗರ್ವವಿದೆ. ಅದಕ್ಕೆ ದೇವದುರ್ಗ ಸಮಾವೇಶ ಉತ್ತರ ನೀಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net