CWMA ಆದೇಶ ವಿಚಾರ; ತಮಿಳುನಾಡಿನ ರಾಜಕಾರಣಿಗಳಲ್ಲಿ ಇರುವ ಒಗ್ಗಟ್ಟು ನಮ್ಮವರಲಿಲ್ಲ: ಎಚ್​.ಡಿ. ದೇವೇಗೌಡ

Untitled design - 2023-09-18T195428.142
Published on

ನವದೆಹಲಿ: ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಇಂದು (ಸೆ.18) ಆದೇಶ ಹೊರಡಿಸಿದೆ.

ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠರಾದ ಎಚ್​.ಡಿ. ದೇವೇಗೌಡ, "ಇವತ್ತಿನ CWMA ಆದೇಶ ಮಹತ್ತರವಾದ ಪೆಟ್ಟು. ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯವಿದೆ, ಮುಂದೇನು ಎಂಬುದು ತಿಳಿದಿಲ್ಲ. ನಮ್ಮ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ" ಎಂದು ಹೇಳಿದರು.

"ನಮ್ಮ ರಾಜ್ಯ ಸರಕಾರ ತೆಗೆದುಕೊಂಡ ನಿರ್ಣಯ ದುರಂತ. ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರು ಎಂಬುದು ತಿಳಿದಿಲ್ಲ. ಎಲ್ಲೋ ಒಂದೆಡೆ ನಾವು ಎಡವಿದ್ದೇವೆ, ನಮ್ಮ ರಾಜ್ಯಕ್ಕೆ ಎದುರಾಗುವ ಅನ್ಯಾಯಕ್ಕೆ ಮೊದಲು ಧರಣಿ ಮಾಡಿದ್ದೆ. ಪ್ರತಿಭಟನೆಗೆ ಕೂತು ಸಮಸ್ಯೆಗೆ ಪರಿಹಾರ ಕೂಡ ಕಂಡುಕೊಂಡಿದ್ದೇವೆ. ಇಂದು ಸದನದಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ್ದೇನೆ" ಎಂದು ಹೇಳಿದರು.

"ಕರ್ನಾಟಕ, ತಮಿಳುನಾಡಿಗೆ ಸಂಬಂಧವಿಲ್ಲದ ಅಧಿಕಾರಿಯನ್ನು ಗ್ರೌಂಡ್​ಗೆ ಕಳುಹಿಸಲಿ. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಲಿ.

ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟ್ಟಿದೆ. ಆದ್ರೆ, ನಮ್ಮ ರಾಜಕಾರಣಿಗಳಲ್ಲಿ ಇಲ್ಲ. ಈ ವಿಚಾರದಲ್ಲಿ ಅವರು ಒಗ್ಗಟ್ಟಾಗಿ ನಿಂತಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net