ವಿಶ್ವ ವಿದ್ಯಾಲಯ ಉಳಿಸಲು ಒತ್ತಾಯಿಸಿ ಮನವಿ ಸಲ್ಲಿಕೆ

23-RNR-05
Published on

ಹಾವೇರಿ: ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚಲು ರಾಜ್ಯ ಸರ್ಕಾರದ ಸಚಿವ ಸಂಪುಟ ಮಾಡಿರುವ ತೀರ್ಮಾನ ರದ್ದುಪಡಿಸಿ, ಯಥಾ ಸ್ಥಿತಿಯಲ್ಲಿ ವಿಶ್ವ ವಿದ್ಯಾಲಯ ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಶನಿವಾರ ಪ್ರವಾಸಿ ಮಂದಿರದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.

ಯಾವುದೇ ಅನುದಾನ ಬರದಿರುವ ಸಂದರ್ಭದಲ್ಲಿಯೂ ವಿಶ್ವ ವಿದ್ಯಾಲಯವು ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಗತ್ಯ ಅನುದಾನ ನೀಡಿ ಬಲಪಡಿಸುವ ಬದಲು ವಿಶ್ವವಿದ್ಯಾಲಯ ಮುಚ್ಚುವುದು ಸರಿಯಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ವಿಶ್ವ ವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಪಡಿಸಿ, ವಿ.ವಿ ಅಭಿವೃದ್ಧಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಮನವಿ ಸ್ವೀಕರಿಸಿದ ರುದ್ರಪ್ಪ ಲಮಾಣಿ ಮಾತನಾಡಿ, ಹಾವೇರಿ ವಿಶ್ವ ವಿದ್ಯಾಲಯ ಇರುವುದರಿಂದ ಜಿಲ್ಲೆಗೂ ಅನುಕೂಲ ಆಗುತ್ತೆ. ಹಾವೇರಿ ವಿ.ವಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಸಮಿತಿ ಸದಸ್ಯರಾದ ಪರಿಮಳಾ ಜೈನ, ಸತೀಶ ಕುಲಕಣಿರ್, ಸತೀಶ ಎಂ.ಬಿ, ಬಸವರಾಜ ಎಸ್​, ಬಸವರಾಜ ಪೂಜಾರ, ಮಲ್ಲಿಕಾರ್ಜುನ ಹಿರೇಮಠ, ಬಸವರಾಜ ಹೆಡಿಗೊಂಡ, ಶ್ರೀಧರ ದೊಡಮನಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net