ಹಾವೇರಿ ವಿಶ್ವ ವಿದ್ಯಾಲಯ ಬಂದ್​ ಮಾಡದಂತೆ ಪ್ರತಿಭಟನೆ

Oplus_131072
Oplus_131072
Published on

ರಾಣೆಬೆನ್ನೂರ: ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ತೀಮಾರ್ನ ಖಂಡಿಸಿ ಹಾಗೂ ನೂತನ ವಿಶ್ವ ವಿದ್ಯಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಮುಂದುವರಿಸುವಂತೆ ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಷನ್​ (ಎಸ್​ಎಫ್​ಐ) ತಾಲೂಕು ಟಕದ ವತಿಯಿಂದ ಗುರುವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್​. ಮಾತನಾಡಿ, ಕಳೆದ 2023ರಲ್ಲಿ ಆರಂಭಗೊಂಡ ಹಾವೇರಿ ವಿಶ್ವವಿದ್ಯಾಲಯ ಸೇರಿ ರಾಜ್ಯದ ವಿವಿಧ 10 ವಿವಿಗಳ ಪೈಕಿ 9 ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೀಮಾರ್ನಿಸಿರುವುದು ಆತಂಕಕಾರಿ ನಡೆಯಾಗಿದೆ. ಇದರಿಂದ ಬಡ ವಿದ್ಯಾಥಿರ್ಗಳಿಗೆ ತೊಂದರೆ ಉಂಟಾಗಲಿದೆ.

ಆದ್ದರಿಂದ ಸರ್ಕಾರ ವಿಶ್ವ ವಿದ್ಯಾಲಯಗಳಿಗೆ ಅಗತ್ಯ ಅನುದಾನ ನೀಡಿ ಮುಂದುವರಿಸಬೇಕು. ಯಾವ ಕಾರಣಕ್ಕೂ ವಿಶ್ವ ವಿದ್ಯಾಲಯಗಳನ್ನು ಮುಚ್ಚಬಾರದು ಎಂದು ಒತ್ತಾಯಿಸಿದರು. ತಹಸೀಲ್ದಾರ್​ ಆರ್​.ಎಚ್​. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಗೌತಮ ಸಾವಕ್ಕನವರ, ಉಪಾಧ್ಯಕ್ಷ ಮಹೇಶ ಮರೋಳ, ಕೃಷ್ಣ ನಾಯಕ, ವಿನಾಯಕ ಮಡಿವಾಳರ, ಮದನ ಹರಿಜನ, ಪರಮೇಶ ಮಲ್ಲಾಡದ, ವಾಸುದೇವ ವಿ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net