ಹಾವೇರಿ ರೈಲು ನಿಲ್ದಾಣ ಅಮೃತ ಭಾರತ ಯೋಜನೆಗೆ ಸೇರ್ಪಡೆ ಮಾಡಲು ಒತ್ತಾಯ

6-RNR-04
Published on

ಹಾವೇರಿ: ಅಮೃತ ಭಾರತ ಯೋಜನೆಯಡಿ ನವೀಕರಿಸಲು ಉದ್ದೇಶಿಸಿರುವ ನೈರುತ್ಯ ರೈಲ್ವೆ ವಲಯದ ಎಂಟು ರೈಲು ನಿಲ್ದಾಣಗಳಿಗೆ ಈಗಾಗಲೇ ಮೋದಿಯವರು ಶಂಕುಸ್ಥಾಪನೆಗೆ ನೆರವೇರಿಸಿದ್ದಾರೆ. ಆದರೆ, ಅದರಲ್ಲಿ ಹಾವೇರಿ ರೈಲು ನಿಲ್ದಾಣ ಕೈಬಿಟ್ಟಿರುವುದು ಬೇಸರದ ಸಂಗತಿಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಕೋರಿಶೆಟ್ಟರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿರುವ ಹುತಾತ್ಮ ಮೈಲಾರ ಮಾದೇವಪ್ಪ ರೈಲ್ವೆ ಸ್ಟೇಷನ್ ಅಭಿವೃದ್ಧಿ ಪಡಿಸಲು ಮಂಜೂರಾತಿ ನೀಡದೆ ಇರುವುದು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಅನ್ಯಾಯ ಮಾಡಿದೆ. ಇದಕ್ಕೆ ಕಾರಣ ಯಾರು ಅನ್ನೋದು ಚರ್ಚೆ ಮಾಡಬೇಕು.
ಹಾವೇರಿ ರೈಲ್ವೆ ಸ್ಟೇಷನ್ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮತ್ತು ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ 25 ಕೋಟಿ ರೂ. ಮಂಜೂರು ನೀಡಲು ಮೋದಿಯವರ ಗಮನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net