

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ದತ್ತಾತ್ರೇಯ ಜಯಂತಿ ಮಹೋತ್ಸವ ವೈಭವದಿಂದ ಜರುಗಿತು.
ಬೆಳಗ್ಗೆ ಶಿರಡಿ ಸಾಯಿಬಾಬಾರಿಗೆ ಭಕ್ತರಿಂದ ರಾಭಿಷೇಕ ನೆರವೇರಿತು. ನಂತರ ಗುರು ದತ್ತಾತ್ರೇಯರ ಪಾದುಕೆ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ನೆರವೇರಿತು. ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಗಣ ಹೋಮ, ದತ್ತ ಹೋಮ, ಪೂರ್ಣಾಹುತಿ ನೆರವೇರಿತು.
ಮಧ್ಯಾಹ್ನ ವಿಶೇಷ ಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು. ಸಂಜೆ ಶ್ರೀ ಸಾಯಿ ಭಜನಾ ಮಂಡಳಿಯಿಂದ ಸಚ್ಛರಿತ್ರೆ ಪಾರಾಯಣ, ಭಜನೆ ಹಾಗೂ ಸಾಮೂಹಿಕ ಅಗ್ನಿಹೋತ್ರ ನಡೆಯಿತು. ಸಂಜೆ ಧೂಪಾರತಿ, ಪಾಲಕಿ ಸೇವೆ ಜರುಗಿತು.
ಶ್ರೀ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ನ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.