

ಹಾವೇರಿ: ರಾಜ್ಯ ಸಂಘಗಳ ನೋಂದಣಿ ಅಧಿನಿಯಮ 1960ರಡಿ ನೋಂದಣಿಯಾದ ಸಂ&ಸಂಸ್ಥೆಗಳು 5 ವರ್ಷಗಳ ಫೈಲಿಂಗ್ ಮಾಡಿಕೊಳ್ಳದೆ ಇರುವ ಸಂಘ-&ಸಂಸ್ಥೆಗಳಗಳನ್ನು ಸದಸ್ಯರ ಹಿತದೃಷ್ಟಿಯಿಂದ ಮತ್ತೊಂದು ಬಾರಿ ಸರ್ಕಾರದ ಖಾತೆಗೆ ದಂಡ ವಿಧಿಸುವ ಷರತ್ತಿಗೊಳಪಟ್ಟು ನವೀಕರಿಸಲು ಸಹಕಾರ ಇಲಾಖೆ ಸೂಚಿಸಿದೆ.
ಐದು ವರ್ಷಗಳಿಗೆ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೆ ಬಾಕಿ ಇರುವ ಸಂಘ-ಸಂಸ್ಥೆಗಳು ಪ್ರತಿ ವರ್ಷಕ್ಕೆ 3 ಸಾವಿರ ರೂ. ಹೆಚ್ಚುವರಿ ದಂಡ ಪಾವತಿಸಿ, ಫೈಲಿಂಗ್ ಮಾಡಿಕೊಳ್ಳಬೇಕು. ಸಂಘದ ಎಲ್ಲ ಆಡಳಿತ ಮಂಡಳಿ ಪಟ್ಟಿ, ಅಡಿಟ್ ವರದಿಗಳನ್ನು ಆನ್ಲೈನ್ನಲ್ಲಿ ಅಥವಾ ಮುದ್ದಾಂ ಸಲ್ಲಿಸಲು ಪ್ರಕಟಣೆ ತಿಳಿಸಿದ್ದಾರೆ.