

ಹಾವೇರಿ: ನಗರದ ಕೆ.ಎಲ್.ಇ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ (ಸಿಬಿಎಸ್‌ಇ) ಫಲಿತಾಂಶ ಶೇ. 100ರಷ್ಟಾಗಿದೆ.
ಪರೀಕ್ಷೆಗೆ ಒಟ್ಟು 99 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 58 ವಿದ್ಯಾರ್ಥಿಗಳು ಅತ್ಯುನ್ನತ, 21 ವಿದ್ಯಾರ್ಥಿಗಳು ಪ್ರಥಮ, 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿ ಸ್ಪಂದನಾ ಭಜಂತ್ರಿ ಶೇ. 94.4ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ, ಪ್ರಾರ್ಥನಾ ಪಾಟೀಲ ಶೇ. 93.8ರಷ್ಟು ಅಂಕಗಳಿಸಿ ದ್ವಿತೀಯ, ಸುಶ್ಮಿತಾ ತಿಪ್ಪಣ್ಣನವರ ಶೇ. 92.8ರಷ್ಟು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.