ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಣೆ

25-RNR-08
Published on

ಹಾವೇರಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಶಾಂತಿಧೂತ ಏಸುಕ್ರಿಸ್ತನ ಜಯಂತಿ ಅಂಗವಾಗಿ ಜಿಲ್ಲಾದ್ಯಂತ ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ-ಸಂಭ್ರಮದಿಂದ ಆಚರಿಸಿದರು.
ಕ್ರೈಸ್ತ ಸಮಾಜದ ಕ್ಯಾಥೋಲಿಕ್ ಮತ್ತು ಪ್ರೋಟೆಸ್ಟ್ ಪಂಥಗಳ ಅನಿಯಾಯಿಗಳು ಚರ್ಚ್‌ಗಳಲ್ಲಿ ಮೊಂಬತ್ತಿಗಳನ್ನು ಬೆಳಗಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಜೋಸೆಫ್ ಹಾಗೂ ಮೇರಿ ಅವರಿಗೆ ನಮಿಸಿದರು. ಕೆಲವರು ಮನೆಗಳಲ್ಲಿಯೇ ಗೋದಲಿ ನಿರ್ಮಿಸಿ, ವಿದ್ಯುತ್ ಅಲಂಕಾರ ಮಾಡಿ ಯೇಸು ಜಯಂತಿಯ ಸಂಭ್ರಮದಿಂದ ಆಚರಿಸಿದರು.
ಕ್ರೈಸ್ತ ಬಾಂಧವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಿಹಿ ವಿತರಿಸಿ ಸಂಭ್ರಮಿಸಿದರು. ನಗರದ ಸೇಂಟ್ ಆನ್ಸ್ ಚರ್ಚ್‌ನಲ್ಲಿ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ನಗರದ ದೇವಧರ ಆಸ್ಪತ್ರೆ ಆವರಣದಲ್ಲಿನ ಗುರು ಕೃಪಾ ಚರ್ಚ್‌ನಲ್ಲಿ ಬಿಶಫ್ (ಫಾದರ್) ನೇತೃತ್ವದಲ್ಲಿ ಕ್ರೈಸ್ತ್ ಸಮಾಜ ಬಾಂಧವರು ಮೇಣದ ಬತ್ತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net