

ಹಾವೇರಿ: ಇಲ್ಲಿಯ ವಿದ್ಯಾನಗರದ ಲೋಕೋಪಯೋಗಿ ಕ್ವಾರ್ಟಸ್ ಕಾಲನಿಯಲ್ಲಿರುವ ಶ್ರೀ ಆಂಜನೇಯ ಹಾಗೂ ಶನೇಶ್ವರ ದೇವರ ಕಾರ್ತೀಕ ದೀಪೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ನಗರದ ವಾಲ್ಮೀಕಿ ವೃತ್ತದಲ್ಲಿರುವ ದೇವಸ್ಥಾನದಲ್ಲಿ ಶನಿವಾರ ಬೆಳಗ್ಗೆ ವಿಶೇಷ ಪೂಜೆಗಳು ನಡೆದವು. ದೀಪೋತ್ಸವ ನಿಮಿತ್ತ ದೇವಸ್ಥಾನ ಹಾಗೂ ದೇವರ ಮೂತಿರ್ಗಳಿಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಬಳಿಕ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ನಡೆಯಿತು.