

ಹಾವೇರಿ: ನಗರದ ವಿದ್ಯಾನಗರದ ಪಶ್ಚಿಮ ಬಡಾವಣೆಯಲ್ಲಿರುವ ಶ್ರೀ ಧರ್ಮಶಾಸ್ತ್ರ ದೇವಸ್ಥಾನದ ಆವರಣದಲ್ಲಿ ಜ. 1ರಂದು ರಾತ್ರಿ 8.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪಡಿಪುಜೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಜ. 7ರಂದು ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯುವುದು. ತುಪ್ಪದ ಕಾಯಿ ತುಂಬಿಸುವವರು ಜ. 6ರೊಳಗೆ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಬೇಕು. ಜ. 8ರಂದು ಶಬರಿಮಲೆ ಯಾತ್ರೆ ನಡೆಯುವುದು ಎಂದು ಶಕ್ತಿ ಬಸವ ಗುರುಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.