ಕಾನೂನು ಸೇವೆಗಳು ಹಳ್ಳಿಯವರೆಗೆ ತಲುಪಲಿ; ಬಿ. ವೀರಪ್ಪ

16-RNR-06
Published on

ಹಾವೇರಿ: ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹೆಚ್ಚಾಗಿರುತ್ತದೆ. ಕಾನೂನು ಸೇವೆಗಳು ಹಳ್ಳಿಗಳಿಗೆ ತಲುಪಬೇಕು. ಆಗ ಮಾತ್ರ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಉಪ ಲೋಕಾಯುಕ್ತ ಬಿ. ವೀರಪ್ಪ ಹೇಳಿದರು.

ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ 1988ರ ಅಡಿಯಲ್ಲಿ ವಕೀಲರ ಪಾತ್ರದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಫೋಕ್ಸೋ ಕಾಯ್ದೆಗಳ ಕುರಿತು ಅರಿವು ತರಬೇಕು. ಇವೆಲ್ಲವೂ ವಕೀಲರ ಕರ್ತವ್ಯಗಳಾಗಿವೆ. ಸಮಾಜವನ್ನು ಕೆಟ್ಟದಾಗಿ ಬಿಂಬಿಸಬಾರದು. ಹೊರತಾಗಿ ಸಮಾಜವನ್ನು ಉತ್ತುಂಗದತ್ತ ತೆಗೆದುಕೊಂಡು ಹೋಗಲು ಶ್ರಮಿಸಬೇಕು. ಆಗ ಮಾತ್ರ ವಕೀಲ ವೃತ್ತಿಗೆ ಗೌರವ ತಂದ ಹಾಗೆ ಆಗುತ್ತದೆ ಎಂದರು.

ಹಿರಿಯ ವಕೀಲರು ನಿಮ್ಮ ಬಳಿ ಕಿರಿಯ ವಕೀಲರಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಬೇಕು. ಕಿರಿಯ ವಕೀಲರು ಸತತವಾಗಿ ಐದು ವರ್ಷಗಳ ಕಾಲ ಕಾಯ, ವಾಚ, ಮನಸ್ಸಾ, ಕಷ್ಟಪಟ್ಟು ಕಾರ್ಯನಿರ್ವಹಿಸಿದರೆ ನಿಮ್ಮ ಜೀವನ ಉತ್ತುಂಗಕ್ಕೆ ಹೋಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲ ಕಾರ್ಯ-ಪ್ರವೃತ್ತರಾಗಬೇಕು ಎಂದರು.

ಲೋಕಾಯುಕ್ತ ಹುದ್ದೆಯು ದೇಶದಲ್ಲಿಯೇ ಕರ್ನಾಟಕ ಲೋಕಾಯುಕ್ತ ಹುದ್ದೆ ತುಂಬಾ ಪ್ರಬಲವಾಗಿದೆ. ಸಮಾಜದಲ್ಲಿ ನಡೆಯುವ ದುರಾಡಳಿತವನ್ನು ತಡೆದು ಸಾರ್ವಜನಿಕರ ಅವಶ್ಯಕತೆಯನ್ನು ಪೂರೈಸುವುದಾಗಿದೆ. ಈ ಹುದ್ದೆಯಿಂದ ಸಮಾಜವನ್ನು ಉತ್ತುಂಗಕ್ಕೂ ತೆಗೆದುಕೊಂಡು ಹೋಗಬಹುದು ಎಂದರು.

ಉಪ ಲೋಕಾಯುಕ್ತ ಬಿ. ವೀರಪ್ಪ ಅವರನ್ನು ವಕೀಲರ ಸಂದಿಂದ ಸನ್ಮಾನಿಸಲಾಯಿತು.

ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಲ್​. ಲಕ್ಷಿ$್ಮನಾರಾಯಣ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ವಕೀಲರ ಸಂಘದ ಅಧ್ಯಕ್ಷ ಎಸ್​.ಎಸ್​. ಜತ್ತಿ, ಉಪಾಧ್ಯಕ್ಷ ಸಿ.ಪಿ. ಜಾವಗಲ್ಲ. ಕವಿತಾ ಕಿತ್ತೂರ, ಬಿ.ಎಸ್​. ಅಂಬ್ಲೇರ, ಸಹ -ಕಾರ್ಯದಶಿರ್ ಎನ್​.ಎಸ್​. ಕಾಳೆಯವರ, ಪಿ.ಎಸ್​. ಹೆಬ್ಬಾಳ, ಆರ್​.ಎಚ್​. ತಂಗೋಡರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net