ಸಂಬಳ ಒಪ್ಪಂದ ಜಾರಿ ಆಗ್ರಹಿಸಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಧರಣಿ

hatti jan 07 2020
Published on

ರಾಯಚೂರು: ಸಂಬಳ ಒಪ್ಪಂದ ಜಾರಿ ವಿಳಂಬ ಖಂಡಿಸಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಪೊಲೀಸ್​ ಠಾಣೆ ಎದುರು ಧರಣಿ ನಡಸುತ್ತಿದ್ದಾರೆ.

ಕಂಪನಿ ನೀಡಿದ ಮಾತಿನಂತೆ ಸಂಬಳವನ್ನು ನೀಡುತ್ತಿಲ್ಲ ಎಂದು ಆಗ್ರಹಿಸಿ ಗಣಿಯಲ್ಲಿ ಕೆಲಸ ಮಾಡುತ್ತಿರುವ 1,500ಕ್ಕೂ ಅಧಿಕ ಮಂದಿ ಹಟ್ಟಿ ಪೊಲೀಸ್​ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ.

ಮುಂಜಾನೆ ಪಾಳಿ ಮುಗಿಸಿ ಆಹಾರವನ್ನು ಸ್ವೀಕರಿಸಿದೆ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧರಣಿ ನಡೆಸುತ್ತಿರುವ ಕಾರ್ಮಿಕರ ಮನವೊಲಿಸಲು ಹಿರಿಯ ಪೊಲೀಸ್​ ಅಧಿಕಾರಿಗಳು ಮುಂದಾದರೂ ಕಾರ್ಮಿಕರು ಸಂಧಾನಕ್ಕೆ ಒಪ್ಪದೆ ಧರಣಿ ನಡೆಸುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ವಾಲಿಬಾಬ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ್ ಅಲಿ ಅವರನ್ನು ಕರೆಸುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net