

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಹರ್ಪೆಟೊಲೊಜಿಸ್ಟ್ ಆಗಿರುವ ಎರಿನ್ ಮೆಕ್ಗೀ ಕೆಲ ವರ್ಷಗಳ ಹಿಂದೆ "ಫೈಂಡ್ ದಿ ಲಿಜಾರ್ಡ್" (ಹಲ್ಲಿಯನ್ನು ಗುರುತಿಸಿ) ಪಜಲ್ ಹೊರತರುವ ಮೂಲಕ ತನ್ನ ಟ್ವಿಟರ್ ಫಾಲೋವರ್ಸ್ಗಳಿಗೆ ಹೊಸ ಬಗೆಯ ಅನುಭವವನ್ನು ನೀಡಿದ್ದರು. ಪ್ರತಿವಾರ ಮೆಕ್ಗೀ ಅವರು ಲಿಜಾರ್ಡ್ ಗುರುತಿಸುವ ಸಂಬಂಧ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕೆಲವು ಚಿತ್ರಗಳಲ್ಲಿರುವ ವಸ್ತು ಅಥವಾ ಪ್ರಾಣಿಗಳನ್ನು ಕೆಲವೊಮ್ಮೆ ಸುಲಭವಾಗಿ ಗುರುತಿಸಬಹುದು. ಇನ್ನು ಕೆಲವೊಮ್ಮೆ ಗುರುತಿಸಲು ಪರದಾಡಿ ತಲೆ ಕೆರೆದುಕೊಳ್ಳುವ ಪರಿಸ್ಥಿತಿಯು ಎದುರಾಗಬಹುದು. ಆದರೂ ಪಜಲ್ ಮಾತ್ರ ಒಳ್ಳೆಯ ಟೈಂಪಾಸ್ ಗೇಮ್ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಎಂದಿನಂತೆ ಮೆಕ್ಗೀ ಅವರು ಈ ಬಾರಿಯು ಒಂದು ಚಿತ್ರವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ಕಂದು ಬಣ್ಣದಿಂದ ಕೂಡಿರುವ ಭೂದೃಶ್ಯದಲ್ಲಿ ತುಂಬಾ ಜಾಣ್ಮೆಯಿಂದ ಅಡಗಿ ಕುಳಿತಿರುವ ಹಲ್ಲಿಯನ್ನು ಗುರುತಿಸುವಿರಾ ನೋಡಿ ಎಂದು ಮೆಕ್ಗೀ ಟ್ವೀಟ್ ಮೂಲಕ ಸವಾಲು ಎಸೆದಿದ್ದಾರೆ.
ಫೋಟೋ ಪೋಸ್ಟ್ ಮಾಡಿದಾಗಿನಿಂದ ವೈರಲ್ ಆಗಿದ್ದು, ಈಗಾಗಲೇ 1300 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದೆ. ಫೋಟೋ ಕುರಿತು ಸಾಕಷ್ಟು ಫನ್ನಿ ಕಮೆಂಟ್ಗಳು ಹರಿದುಬಂದಿದ್ದು, ಅದನ್ನೂ ನೀವಿಲ್ಲಿ ಕಾಣಬಹುದಾಗಿದೆ. ಚಿತ್ರ ನೋಡಿ ನಿಮಗೆ ಏನು ಅನಿಸುತ್ತದೆಯೋ ಅದನ್ನು ಸಹ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದು. (ಏಜೆನ್ಸೀಸ್)