ಹಾಥರಸ್​ ಗ್ಯಾಂಗ್​ ರೇಪ್​: ಗ್ರಾಮಕ್ಕೆ ಭೇಟಿ ನೀಡಿದ್ದ ಆಪ್​ ಶಾಸಕನ ವಿರುದ್ಧ ಪ್ರಕರಣ ದಾಖಲು

AAP MLA
Published on

ಲಖನೌ: ಹಾಥರಸ್​ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದು, ಸಂತ್ರಸ್ತೆ ಸಾವನ್ನಪ್ಪುತ್ತಿದ್ದಂತೆ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ಅಲ್ಲಿಗೆ ಭೇಟಿ ನೀಡಿದ್ದಾರೆ. ಹಾಗೇ ಅಕ್ಟೋಬರ್​ 4ರಂದು ಹಾಥರಸ್​ಗೆ ಭೇಟಿ ನೀಡಿದ ಆಮ್​ ಆದ್ಮಿ ಪಾರ್ಟಿ (ಆಪ್​) ಶಾಸಕ ಕುಲದೀಪ್​ ಕುಮಾರ್​ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೆಹಲಿಯ ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಕುಲದೀಪ್​ ಕುಮಾರ್​ಗೆ ಸೆಪ್ಟೆಂಬರ್​ 29ರಂದು ಕರೊನಾ ಸೋಂಕು ದೃಢಪಟ್ಟಿದೆ. ಆದರೆ ಅದಾದ ನಾಲ್ಕೇ ದಿನಕ್ಕೆ ಹಾಥರಸ್​ಗೆ ಭೇಟಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ‘ಸರ್ಕಾರಿ ಬಸ್​​ಗಳಲ್ಲಿ ಅಪಘಾತ ಮುನ್ಸೂಚನೆ ನೀಡುವ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ’

ಒಂದೊಮ್ಮೆ ಕೊವಿಡ್​-19 ನೆಗೆಟಿವ್​ ಬಂದಿದ್ದರೂ ಶಾಸಕರು 14 ದಿನಗಳ ಕ್ವಾರಂಟೈನ್​​ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಿತ್ತು. ಆದರೆ ಅವರು ಅಕ್ಟೋಬರ್​ 4ರಂದು ಹಾಥರಸ್​ಗೆ ಆಗಮಿಸಿದ್ದರು. ಅವರಿಗೆ ನೋಟಿಸ್​ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 29ರಂದು ಟ್ವೀಟ್​ ಮಾಡಿದ್ದ ಆಪ್​ ಶಾಸಕ, ನನಗೆ ಸಣ್ಣ ಜ್ವರ ಇತ್ತು. ಟೆಸ್ಟ್ ಮಾಡಿಸಿದಾಗ ಕೊವಿಡ್​ ಸೋಂಕು ದೃಢಪಟ್ಟಿದೆ. ಕಳೆದ ಎರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ತಪಾಸಣೆಗೆ ಒಳಗಾಗಿ ಎಂದು ತಿಳಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net