More

    ‘ಸರ್ಕಾರಿ ಬಸ್​​ಗಳಲ್ಲಿ ಅಪಘಾತ ಮುನ್ಸೂಚನೆ ನೀಡುವ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ’

    ಬೆಂಗಳೂರು: ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಸಾರಿಗೆ ಬಸ್​​ಗಳಲ್ಲಿ ವಿಶೇಷ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ತಿಳಿಸಿದರು.
    ಬೇರೆ ವಾಹನಗಳು ಆಕಸ್ಮಿಕವಾಗಿ ಎದುರು ಬಂದಾಗ..ಅಥವಾ ಯಾವುದಾದರೂ ವ್ಯಕ್ತಿ ಅಡ್ಡ ಬಂದಲ್ಲಿ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿ ಬ್ರೇಕ್​ ಹಾಕುವ ಆಧುನಿಕ ತಂತ್ರಜ್ಞಾನ ಅಳವಡಿಕೆ ಪ್ರಾಯೋಗಿಕ ಹಂತದಲ್ಲಿ ಇದೆ. ಎಲ್ಲವೂ ಸರಿಯಾಗಿ ಅದು ಅನುಷ್ಠಾನಗೊಂಡರೆ ತುಂಬ ಅನುಕೂಲವಾಗುತ್ತದೆ. ಅಪಘಾತ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದರು.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದರು.  ಇದನ್ನೂ ಓದಿ: ಡಿಸಿಎಂ ಕಾರಜೋಳ ಕರೊನಾದಿಂದ ಗುಣಮುಖ- ಆಸ್ಪತ್ರೆಯಿಂದ ಡಿಸ್​ಚಾರ್ಜ್​

    ಅಪಘಾತಕ್ಕಾಗಿ ಪರಿಹಾರ ನೀಡಲೆಂದೇ ನಮ್ಮ ರಾಜ್ಯದಲ್ಲಿ ಪ್ರತಿವರ್ಷ 100 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ವ್ಯಯ ಆಗುತ್ತದೆ. ಅನೇಕ ಸಾವು-ನೋವುಗಳು ಉಂಟಾಗುತ್ತದೆ. ಅದೆಷ್ಟೋ ಸಲ ಬೇರೆ ವಾಹನಗಳ ಚಾಲಕರು ನಿರ್ಲಕ್ಷ್ಯದಿಂದ ನಡೆದುಕೊಂಡು ಅಪಘಾತವಾದರೂ ನಮ್ಮ ಸಂಸ್ಥೆಯ ಚಾಲಕರು ಬೆಲೆ ತೆರಬೇಕು..ನಾವೇ ಪರಿಹಾರ ಕೊಡಬೇಕು. ಹಾಗಾಗಿ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುನ್ಸೂಚನೆ ನೀಡುವ ಉಪಕರಣವನ್ನು ಬಸ್​​ನಲ್ಲಿ ಅಳವಡಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಈಗಾಗಲೇ ಹೈಟೆಕ್​ ಸಂಸ್ಥೆಗಳೊಂದಿಗೆ ಸಾರಿಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ ಎಂದು ಸವದಿ ಅವರು ಸ್ಪಷ್ಟಪಡಿಸಿದರು.

    ಫೋನ್​ಗಳಲ್ಲಿ ಬಳಸುವ ಅಂಡ್ರಾಯ್ಡ್​ ಸಿಸ್ಟಂ ವಿವಾದ: ಅಮೆರಿಕದ ‘ಸುಪ್ರೀಂ’ ಬಾಗಿಲಿದೆ ಗೂಗಲ್​, ಒರಾಕಲ್​ ಕಿತ್ತಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts