ಗ್ರಾಹಕರಿಗೆ ತೊಂದರೆರಹಿತ ಸೇವೆ

Oplus_131072
Oplus_131072
Published on

ಹಲಗೂರು: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಮುಕ್ತವಾಗಿ ಸೇವೆ ದೊರಕಲಿದೆ ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರೂ ಆದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಗ್ರಾಮದಲ್ಲಿ ನೂತನವಾಗಿ ಆರಂಭವಾದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಕನಕಪುರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್ ತುಂಬ ಕಿರಿದಾಗಿದ್ದು, ಗ್ರಾಹಕರಿಗೆ ಹಣ ಪಡೆಯಲು ಹಾಗೂ ವ್ಯವಹಾರ ನಡೆಸಲು ತೊಂದರೆ ಆಗುತ್ತಿತ್ತು. ಇದನ್ನು ಮನಗಂಡು ಮಳವಳ್ಳಿ ರಸ್ತೆಯಲ್ಲಿ ನೂತನವಾಗಿ ವಿಶಾಲವಾದ ಕೊಠಡಿಗಳನ್ನು ಒಳಗೊಂಡಂತೆ ಬ್ಯಾಂಕ್ ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕಿನ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ನೀಡಲಾಗುತ್ತದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಸಿ.ಜೋಗಿ ಗೌಡ, ನಿರ್ದೇಶಕರಾದ ಎಚ್.ಸಿ. ಕಾಳೇಗೌಡ ಎಚ್.ವಿ. ಅಶ್ವಿನ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ವನಜಾಕ್ಷಿ, ಜನರಲ್ ಮ್ಯಾನೇಜರ್ ಆರ್.ಜೆ.ರೂಪಾ, ಹಲಗೂರು ಶಾಖೆಯ ವ್ಯವಸ್ಥಾಪಕರಾದ ವಿ.ಜಿ. ಕುಮಾರ್, ಸಿಬ್ಬಂದಿ ಪ್ರಭಾಕರ್ ಮಹಾದೇವಸ್ವಾಮಿ, ಸುರೇಶ್, ನಿಂಗರಾಜು, ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ, ಕಾರ್ಯಕರ್ತರಾದ ಎಚ್. ವಿ. ರಾಜು, ಮರಿಸ್ವಾಮಿ, ಚಂದ್ರಕುಮಾರ್, ಮೋಹನ್ ಕುಮಾರ್, ರವೀಶ್, ಪದ್ಮನಾಭ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net