ಗಂಡ-ಮಕ್ಕಳನ್ನು ಬಿಟ್ಟು ಬರಲು ಒಪ್ಪದ ಮಹಿಳೆ ಬದುಕು ದುರಂತ ಅಂತ್ಯ

murder case
Published on

ಹಾಸನ: ಆಕೆಗೆ ಮದುವೆ ಆಗಿ ಮಕ್ಕಳಿದ್ದರು. ಅವಳ ಬೆನ್ನಹಿಂದೆ ಬಿದ್ದ ವ್ಯಕ್ತಿಯೊಬ್ಬ, 'ನಿನ್ನ ಮಕ್ಕಳನ್ನು ಬಿಟ್ಟು ಬಾ.. ನಾವಿಬ್ಬರೂ ಮದುವೆ ಆಗೋಣ' ಎಂದು ಪೀಡಿಸುತ್ತಲೇ ಇದ್ದ. ಇದಕ್ಕೊಪ್ಪದ ಮಹಿಳೆ ಬದುಕು ದಾರಿಯಲ್ಲೇ ದುರಂತ ಅಂತ್ಯ ಕಂಡಿದೆ.

ಹಾಸನ ತಾಲೂಕಿನ ಚಿಕ್ಕಬೂವನಹಳ್ಳಿ ಗಾಯತ್ರಿ (30) ಕೊಲೆಯಾಗಿದ್ದಾಳೆ. ಕೆಲವತ್ತಿ ಗ್ರಾಮದ ಮಂಜುನಾಥ್ ಕೊಲೆ ಆರೋಪಿ.

ಕೆಲ‌ ವರ್ಷಗಳಿಂದ ಗಾಯತ್ರಿ ಹಾಗೂ ಮಂಜುನಾಥ್ ನಡುವೆ ಸ್ನೇಹ ಬೆಳೆದಿತ್ತು. ಅಲ್ಲದೆ ಗಾಯತ್ರಿಗೆ ಬೇರೊಬ್ಬನ ಜತೆಗೆ ಮದುವೆ ಆಗಿ ಮಕ್ಕಳಿವೆ. ಈ ನಡುವೆ ಗಾಯತ್ರಿ ಮತ್ತು ಮಂಜುನಾಥ್​ ನಡುವೆ ಸಲಿಗೆ ಬೆಳೆದು ಅಕ್ರಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಅಲ್ಲದೆ ಗಾಯತ್ರಿಗೆ ತನ್ನೊಂದಿಗೆ ಮದುವೆ ಆಗುವಂತೆಯೂ ಪ್ರಿಯಕರ ಹೇಳಿದ್ದ. ಇದಕ್ಕೆ ಆಕೆ ಒಪ್ಪಿರಲಿಲ್ಲ.

ಇದೇ ವಿಚಾರವಾಗಿ ಗಾಯತ್ರಿಯ ಹಿಂದೆ ಬಿದ್ದಿದ್ದ ಮಂಜುನಾಥ​, ಗಂಡ-ಮಕ್ಕಳನ್ನು ಬಿಟ್ಟು ಬರುವಂತೆ ಪೀಡಿಸುತ್ತಿದ್ದ. ಇದಕ್ಕೊಪ್ಪ ವಿವಾಹಿತೆಯ ಮೇಲೆ ಸಿಟ್ಟಿಗೆದ್ದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಗಾಯತ್ರಿ ಕೆಲಸಕ್ಕೆ ಹೋಗುವಾಗ ಅಡ್ಡಗಟ್ಟಿದ ಆರೋಪಿ ಆಕೆಯನ್ನು ಕೊಚ್ಚಿ ಕೊಂದಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ದುದ್ದ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net