ಅನ್ಯ ರಾಜ್ಯಗಳಲ್ಲಿರುವ ಕನ್ನಡಿಗರು ಬದುಕಿದರೆ ಅಲ್ಲೇ ಬದುಕಲಿ, ಸತ್ತರೆ ಅಲ್ಲೇ ಸಾಯಲಿ!

Shivalinge Gowda
Published on

ಹಾಸನ: ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದವರ ಪ್ರವೇಶ ತಡೆಯಬೇಕು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಸಕರು ಆತಂಕ ಹೊರ ಹಾಕಿದ್ದಾರೆ.

ಪ್ರಧಾನಿ ಮೋದಿ ಅವರು ಏನೇ ನಿರ್ಧಾರ ತೆಗೆದುಕೊಂಡರೂ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡಬೇಕು. ಇನ್ನು ಸ್ವಲ್ಪ ದಿನ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಯಾರು ಬರದಂತೆ ತಡೆಹಿಡಿಯಬೇಕು ಎಂದರು.

ಮನೆಯೊಳಗೆ ಕರೊನಾ ಮಾರಿಯನ್ನು ಕೂಡಿಕೊಳ್ಳಲು ಆಗುತ್ತಾ. ಯಾರು ಎಲ್ಲಿ ಬದುಕಿತ್ತಿದ್ದಾರೆಯೊ ಅಲ್ಲೇ ಬದುಕಲಿ. ಸತ್ತರೆ ಅಲ್ಲೇ ಸಾಯಲಿ. 25 ವರ್ಷದಿಂದ ಅನ್ಯ ರಾಜ್ಯಗಳಲ್ಲಿ ಬದಕಿ ಈಗ ಕರ್ನಾಟಕ ಸುರಕ್ಷಿತ ತಾಣ ಅಂತ ಬರುತ್ತಿದ್ದಾರೆ. ಹೀಗಾಗಿ ಯಾರು ಬರುವುದು ಬೇಡ. ಅಲ್ಲೇ ಇರಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಲೂ ಹಾಸನ ಜಿಲ್ಲೆ ಸುರಕ್ಷಿತವಾಗಿದೆ. ಬಾಂಬೆ ಸೇರಿದಂತೆ ಹೊರ ರಾಜ್ಯಗಳ ಸಹವಾಸವೇ ನಮಗೆ ಬೇಡ.  ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net