More

    ಮನೆಮನೆಗೆ ತೆರಳಿ ಕರೊನಾ ವೈರಸ್​ ಪರೀಕ್ಷೆ ಆರಂಭ

    ಬೆಂಗಳೂರು: ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಅನುಮಾನವಿದ್ದು, ಗುರುವಾರ ಕೆಲವು ರಸ್ತೆಗಳಲ್ಲಿ ಮನೆ ಮನೆ ಕರೊನಾ ಪರೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

    ಮಧ್ಯಾಹ್ನದವರೆಗೆ 11 ಜನರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಕೆಎಸ್​ಆರ್​ಟಿಸಿ ವ್ಯವಸ್ಥೆ ಮಾಡಿರುವ ಸಂಚಾರಿ ಕ್ಲಿನಿಕ್​ಗಳಲ್ಲಿ ಒಂದು ಬಸ್ ಅನ್ನು ಜಗಜೀವನರಾಂನಗರ ಪೊಲೀಸ್ ನಿಲ್ದಾಣದ ಬಳಿ ನಿಲುಗಡೆ ಮಾಡಿ ಅರಾಫತ್​ನಗರದಿಂದ ಜನರನ್ನು ಕರೆತಂದು ಸ್ವಾಬ್ ಸಂಗ್ರಹಣೆ ಮಾಡಲಾಗುತ್ತಿದೆ. ಶುಕ್ರವಾರದಿಂದ ಇನ್ನೂ ಎರಡು ಹೆಚ್ಚುವರಿ ಕಿಯಾಸ್ಕ್​ಗಳನ್ನು ಸ್ಥಾಪಿಸಲಾಗುವುದು. ಅಲ್ಲಿ ಸಂಗ್ರಹಿಸಿದ ಗಂಟಲು ದ್ರವ ಪರೀಕ್ಷೆಗೆ ಗೋರಿಪಾಳ್ಯದ ರೆಫೆರಲ್ ಆಸ್ಪತ್ರೆಯಲ್ಲಿ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು ಹಾಗೂ ಇತರೆ ಕಾಯಿಲೆಗಳಿಂದ ಬಳಲು ವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

    ಅನಗತ್ಯ ಸಂಚಾರಕ್ಕೆ ಬ್ರೇಕ್: ಪಾದರಾಯನಪುರ ಕಂಟೇನ್​ವೆುಂಟ್ ಜೋನ್​ಗೆ ಆರೋಗ್ಯಾಧಿಕಾರಿಗಳು, ಸ್ಥಳೀಯ ಕಾಪೋರೇಟರ್ ಇಮ್ರಾನ್ ಪಾಷಾ ಜತೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾರಿಕೇಡ್ ದಾಟಿ ಜನರು ಹೊರಹೋಗು ವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

    ಸ್ವಚ್ಛತೆಗೆ ಹೆಚ್ಚುವರಿ ತಂಡ

    ಪಾದರಾಯನಪುರದಲ್ಲಿ ಸ್ವಚ್ಛತೆ ಕೊರತೆ ಕಾಡುತ್ತಿದ್ದು, ಸ್ಥಳೀಯ ಕಾರ್ವಿುಕರು ಪ್ರತಿನಿತ್ಯ ಕೆಲಸ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಹೆಚ್ಚುವರಿ ತಂಡವನ್ನು ನಿಯೋಜಿಸ ಲಾಗಿದೆ. ಅಲ್ಲಿನ ಸಣ್ಣ ರಸ್ತೆಗಳಲ್ಲಿ ಜನರು ಮನೆಗಳಿಂದ ಹೊರಬಾರದಂತೆ ಆಟೋಗಳ ಮೂಲಕ ಜಾಗೃತಿ ಮೂಡಿಸಲು ಇನ್ಸಿಡೆಂಟ್ ಕಮಾಂಡರ್​ಗಳಿಗೆ ಸೂಚಿಸಲಾಗಿದೆ ಎಂದು ಅನಿಲ್​ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts