ಹಾಸನಾಂಬೆ ಬಾಗಿಲು ತೆರೆಯಲು ಕ್ಷಣ ಗಣನೆ; ಹೂವಿನಿಂದ ಅಲಂಕೃತಗೊಂಡ ದೇವಸ್ಥಾನದ ಆವರಣ

temple
Published on

ಹಾಸನ: ಹಾಸನಾಂಬೆ ಗರ್ಭಗುಡಿ ಬಾಗಿಲು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ಇಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಬಾಗಿಲು ತೆರೆಯಲಿದ್ದು, ಬಾಗಿಲು ತೆರೆಯಲು ಕ್ಷಣ ಗಣನೆ ಆರಂಭವಾಗಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಹಾಸನ ಡಿಸಿ ಎಸ್ಪಿ ನೇತೃತ್ವದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಸಪ್ತ ಮಾತೃಕೆಯರಲ್ಲಿ ವೈಷ್ಣವೀ , ಕೌಮಾರಿ ,ಮಹೇಶ್ವರಿ ರೂಪದಕ್ಲಿ ಹಾಸನಾಂಬೆಯಲ್ಲಿ ನೆಲೆಸಿದ್ದಾರೆ. ಆಶ್ವೀಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆಯೋದು ಪ್ರತೀತಿ. ಬಲಿಪಾಡ್ಯಮಿ ದಿನ ಬಾಗಿಲು ಮುಚ್ಚೊದು ಸಂಪ್ರದಾಯ.

ಇಂದು ನವೆಂಬರ್ 2 ರಿಂದ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿ ನವೆಂಬರ್ 15 ರಂದು ಗರ್ಭಗುಡಿ ಬಾಗಿಲು ಹಾಕಲಾಗುತ್ತದೆ. ಬಾಗಿಲು ತೆರೆದ ಮೊದಲ ದಿನ, ಗರ್ಭಗುಡಿ ಬಾಗಿಲು ಹಾಕುವ ದಿನ ಸಾರ್ವಜನಿಕರಿಗೆ ದರುಶನ ಇರುವುದಿಲ್ಲ. ಹಾಸನಾಂಬೆ ಗರ್ಭಗುಡಿ ಇರುವ ಮುಖ್ಯ ಪ್ರವೇಶ ದ್ವಾರ ಬಳಿ ಅರಸು ವಂಶಸ್ಥರು ತಲವಾರದಿಂದ ಬಾಳೆ ಕಂಬ ಕಡಿಯೋ ಸಮಯಕ್ಕೆ ಸರಿಯಾಗಿ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net