ಖ್ಯಾತ ಯೂಟ್ಯೂಬರ್​ ಹರ್ಷ ಸಾಯಿ ಹಣದ ರಹಸ್ಯ ಬಯಲು ಮಾಡಿದ ವ್ಯಕ್ತಿಯಿಂದ ಮತ್ತೊಂದು ಶಾಕಿಂಗ್​ ವಿಡಿಯೋ!

Harsha Sai
Published on

ವಿಜಯವಾಡ: ತೆಲುಗು ರಾಜ್ಯಗಳಲ್ಲಿ ಹರ್ಷ ಸಾಯಿ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಬಡವರಿಗೆ ಟಿವಿ, ಫ್ರಿಡ್ಜ್ ಕೊಡುವುದು ಮತ್ತು ಹಣದ ಅವಶ್ಯಕತೆ ಇರುವವರಿಗೆ ಆರ್ಥಿಕ ನೆರವನ್ನು ಒದಗಿಸುವುದು ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಈ ಕಾರಣದಿಂದ ಹರ್ಷ ಸಾಯಿ ಫಾಲೋವರ್ಸ್ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇದೇ ಕ್ರೇಜ್‌ನೊಂದಿಗೆ ಸಿನಿಮಾವನ್ನು ಕೂಡ ಆರಂಭಿಸಿದ್ದಾರೆ. ಆದರೆ ಹರ್ಷ ಸಾಯಿ, ಜನರು ಅಂದುಕೊಂಡಷ್ಟು ಒಳ್ಳೆಯವರಲ್ಲ ಎಂದು ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಆರೋಪ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಮತ್ತೊಮ್ಮೆ ಹರ್ಷ ಸಾಯಿ ಕುರಿತು ಆತ ನೀಡಿರುವ ಹೇಳಿಕೆ ಅಚ್ಚರಿಯ ಜತೆಗೆ ಆಘಾತಕ್ಕೂ ಕಾರಣವಾಗಿದೆ.

ರವಿ ಮಾರ್ಕ್​ ಅಲಿಯಾಸ್ ಯುವಸಾಮ್ರಾಟ್ ರವಿ ಎಂಬುವರು ಹರ್ಷ ಸಾಯಿ ಒಬ್ಬ ಮೋಸಗಾರ ಎಂದು ಆರೋಪಿಸಿ ಅನೇಕ ವಿಡಿಯೋಗಳನ್ನು ಕಾಲ ಕಾಲಕ್ಕೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾ ಬರುತ್ತಿದ್ದರು. ಅಲ್ಲದೆ, ಅನೇಕ ಸಂದರ್ಶನಗಳಲ್ಲಿಯೂ ಹರ್ಷ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬರುತ್ತಿದ್ದರು. ಇದೆಲ್ಲದರ ನಡುವೆ ಇದೀಗ ಮತ್ತೊಂದು ವಿಡಿಯೋ ಪೋಸ್ಟ್​ ಮಾಡಿರುವ ರವಿ, ಹರ್ಷ ಸಾಯಿ ಬಗ್ಗೆ ಇನ್ನು ಮುಂದೆ ಸಂದರ್ಶನ ನೀಡಲು ಬಯಸುವುದಿಲ್ಲ ಮತ್ತು ಯಾವುದೇ ಚಾನೆಲ್​ನಲ್ಲಿ ಕೂರಲು ಬಯಸುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಷ್ಟು ದಿನ ಹರ್ಷ ಸಾಯಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಅಕ್ರಮ ಬೆಟ್ಟಿಂಗ್ ಆ್ಯಪ್​ಗಳ ವಿರುದ್ಧ ಹೋರಾಟ ನಡೆಸುತ್ತಿರುವ ಯುವಸಾಮ್ರಾಟ್ ಬೇಸತ್ತಿದ್ದಾರೋ ಅಥವಾ ಯಾರೋ ತೊಂದರೆ ಕೊಟ್ಟಿದ್ದಾರೋ ಗೊತ್ತಿಲ್ಲ, ಆದರೆ ಪ್ರಕರಣದಲ್ಲಿ ಹಿಂದೆ ಸರಿದಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹರ್ಷ ಸಾಯಿ ಕುರಿತು ಇದೇ ನನ್ನ ಕೊನೆಯ ವಿಡಿಯೋ ಎಂದು ರವಿ ಪ್ರತಿಕ್ರಿಯಿಸಿದ್ದಾರೆ.

ಹರ್ಷ ಸಾಯಿ ಅವರು ನಾಲ್ಕು ವರ್ಷಗಳಿಂದ ಅಕ್ರಮ ಬೆಟ್ಟಿಂಗ್ ಆ್ಯಪ್​ಗಳನ್ನು ಪ್ರಚಾರ ಮಾಡುತ್ತಿರುವ ಆರೋಪ ಹೊತ್ತಿದ್ದಾರೆ. ಹರ್ಷ ಸಾಯಿ ವಿರುದ್ಧವೂ ಇತ್ತೀಚೆಗೆ ರವಿ ಅವರು ಧ್ವನಿ ಎತ್ತಿದರು. ಹರ್ಷ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶಿಕ್ಷೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು. ಎಷ್ಟೋ ಅಮಾಯಕರು ಹಣ ಕಳೆದುಕೊಂಡಿದ್ದಾರೆ. ಹರ್ಷ ಸಾಯಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ. ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದರೆ 40 ರಿಂದ 60 ಲಕ್ಷ ಸಿಗುತ್ತದೆ. ಸೇವೆಯ ನೆಪದಲ್ಲಿ ಹರ್ಷ ಸಾಯಿ ಮಾಡುತ್ತಿರುವುದು ಮೋಸ ಎಂದು ರವಿ ಆರೋಪ ಮಾಡಿದರು.

ಇದಕ್ಕೆ ಸಂದರ್ಶನವೊಂದರಲ್ಲಿ ಹರ್ಷ ಸಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ರವಿ ಈ ಪ್ರಕರಣದಿಂದ ಹಿಂಜರಿದಿರುವಂತೆ ಕಾಣುತ್ತದೆ. ಹರ್ಷ ಸಾಯಿ ಎಂಟ್ರಿಯಿಂದ ಯುವಸಾಮ್ರಾಟ್ ಹಿಂದೆ ಸರಿದಿದೆಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇತ್ತೀಚೆಗೆ, ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಆ ವಿಡಿಯೋದಲ್ಲಿ ಹರ್ಷ ಸಾಯಿ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net