

ಬೆಂಗಳೂರು : ಹಣ ವಸೂಲಿಗಾಗಿ ಬಂದಿದ್ದ ಪುಡಿರೌಡಿಯೊಬ್ಬ ವೃದ್ಧ ಅಂಗಡಿ ಮಾಲೀಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡಿರುವ ಘಟನೆ ಡಿ.ಜೆ ಹಳ್ಳಿಯ ಪ್ರಿಯನಗರದಲ್ಲಿ ಬುಧವಾರ ನಡೆದಿದೆ.
ಪ್ರಿಯನಗರ ಮುಖ್ಯರಸ್ತೆಯಲ್ಲಿರುವ ಚಿಲ್ಲರೆ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಹಣ ಕೊಡದಿದ್ದರೆ ಹಲ್ಲೆ ಮಾಡುವುದಾಗಿ ಮಾಲೀಕನ ಬಳಿ ಬೆದರಿಕೆ ಹಾಕಿದ್ದಲ್ಲದೆ, ಹಣಕ್ಕಾಗಿ ಮಾಲೀಕನ ಮುಂದೆ ಕೂಗಾಡಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ಹುಚ್ಚಾಟ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.