ನನಗೆ ಚಾಕೊಲೇಟ್​ ಕೊಟ್ಟು.. ಕಿರುಕುಳ!; ತನ್ನ ಚಿಕ್ಕಪ್ಪನ ಕರಾಳ ಮುಖ ಬಿಚ್ಚಿಟ್ಟ ನಟಿ ಚಹತ್ ಖನ್ನಾ | Harasse

dk - 2025-04-11T181815.344
Published on

Harasse : ಹಿಂದಿಯ ಜನಪ್ರಿಯ ಟಿವಿ ಸೀರಿಯಲ್​ ''ಬಡೇ ಅಚ್ಚೆ ಲಗ್ತೆ ಹೈ''ನ ಆಯೇಷಾ ಶರ್ಮಾ ಪಾತ್ರಕ್ಕೆ ಹೆಸರುವಾಸಿಯಾದ ನಟಿ ಚಹತ್​ ಖನ್ನಾ, ತನ್ನ ಚಿಕ್ಕಪ್ಪನಿಂದಲೇ ಬಾಲ್ಯದಲ್ಲಿ ಕಿರುಕುಳ ಅನುಭವಿಸಿರುವ ಅಘಾತಕಾರಿ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ.

ಚಾಹತ್ ತಮ್ಮ ಕುಟುಂಬದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಒಳಗೊಂಡ ಘಟನೆಯನ್ನು ನೆನಪಿಸಿಕೊಂಡರು, ಅವರು ಈಗ ತಾನು ಮಗುವಾಗಿದ್ದಾಗ ತನಗೆ ಕಿರುಕುಳ ನೀಡಿದ್ದರು ಎಂಬ ವಿಚಾರ ಇತ್ತೀಚಿಗೆ ಅರಿತುಕೊಂಡ ಅವರು, ಇದೀಗ ತನಗಾದ ಅನಭವವನ್ನು ಹಂಚಿಕೊಂಡಿದ್ದಾರೆ.

ನಟಿ ಚಾಹತ್​ ಖನ್ನಾ ಹೇಳಿದ್ದೇನು.?

ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಾಹತ್​ ಖನ್ನಾ, ''ಎರಡು ವರ್ಷಗಳಿಂದೆ ನನ್ನ ಗೆಳತಿಯೊಬ್ಬಳು ನನ್ನ ಚಿಕ್ಕಪ್ಪ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಅದು ಯಾವ ವಿಚಾರಕ್ಕೆ ಮತ್ತು ಹೇಗೆ ಪ್ರಕರಣ ದಾಖಲಿಸಿದ್ದಾಳೆ ಎಂದು ತಿಳಿದುಕೊಂಡೆ.ಅವಳು ಎಲ್ಲವನ್ನು ವಿವರವಾಗಿ ಹೇಳಿದಳು. ಈಕೆ ಆದ ಆನುಭವ ನನಗೂ ಆಗಿತ್ತು ಎಂದು ನಾನು ಅರೆತುಕೊಂಡೆ'' ಎಂದು ಹೇಳಿದ್ದಾರೆ.

ಅವರು(ಚಿಕ್ಕಪ್ಪ) ನನ್ನನ್ನು ತಮ್ಮ ಮಡಿಲಲ್ಲಿ ಕೂರಿಸಿ ಚಾಕೊಲೇಟ್‌ಗಳನ್ನು ನೀಡುತ್ತಿದ್ದರು. ಆಗ ನಾನು ಅದರ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಅವಳು ನನಗಿಂತ ಸಲ್ಪ ದೊಡ್ಡವಳಾಗಿದ್ದರಿಂದ ಅವನು ಏನು ಮಾಡುತ್ತಿದ್ದಾನೆ ಎಂದು ತಿಳಿದ ಆಕೆ ದೂರು ದಾಖಲಿಸಿದ್ದಾಳೆ. ಆದರೆ, ನನಗೆ ಕಿರುಕುಳ ನೀಡಿದಾಗ ಚಿಕ್ಕವಳು ನನಗೆ ಆಗ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net