ಹೊಸವರ್ಷಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು: ಯುವಕನ ಹೈಡ್ರಾಮ

Police 1 jan 20
Published on

ಬೆಂಗಳೂರು: ಹೊಸವರ್ಷಾಚರಣೆ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಪಾನಮತ್ತರಾಗಿ ವಾಹನ ಚಲಾಯಿಸಿದವರ ಜೇಬಿಗೆ ಸಂಚಾರಿ ಪೊಲೀಸರು ಕತ್ತರಿ ಹಾಕಿದ್ದಾರೆ. ಸಂಚಾರಿ ಪೊಲೀಸರು ಇಂದು ಬೆಳಗಿನ ಜಾವ 3 ಗಂಟೆಯವರೆಗೂ ಉಪ್ಪಾರಪೇಟೆ ಸಂಚಾರಿ ಠಾಣೆ ಮುಂಭಾಗ ಡ್ರಂಕ್ ಎಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ.

ತಪಾಸಣೆ ವೇಳೆ ಯುವಕನೊಬ್ಬ ಹೈಡ್ರಾಮ ಮಾಡಿ ಸುಮಾರು ಅರ್ಧತಾಸು ಪೊಲೀಸರನ್ನು ಸತಾಯಿಸಿದ್ದಾನೆ. ಆಲ್ಕೋಮೀಟರ್ ಊದಲು ನಿರಾಕರಿಸಿ, ಪೊಲೀಸರ ಜತೆ ಮಾತಿನ ವಾಗ್ದಾದಕ್ಕೆ ಇಳಿದಿದ್ದಾನೆ. ದಂಡ ವಿಧಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಯುವಕನನ್ನು ಠಾಣೆಗೆ ಕರೆತಂದು ಪೊಲೀಸರು ಎಚ್ಚರಿಕೆ ನೀಡಿ, ಡಿಎಲ್ ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net