

ಬೆಂಗಳೂರು: ಕಿರಣ್ ರಾಜ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ 777 ಚಾರ್ಲಿ ಚಿತ್ರ ಇತ್ತೀಚೆಗಷ್ಟೇ ದಾನಿಶ್ ಶೇಟ್ ಜನ್ಮ ದಿನದ ಪ್ರಯುಕ್ತ ಅವರ ಲುಕ್ ಬಿಡುಗಡೆ ಮಾಡಿಕೊಳ್ಳುವುದರ ಜತೆಗೆ, ಅವರೂ ಸಿನಿಮಾದಲ್ಲಿರಲ್ಲಿದ್ದಾರೆ ಎಂಬ ಗುಟ್ಟನ್ನು ಹೊರಹಾಕಿತ್ತು. ಇದೀಗ ಅದೇ ಚಿತ್ರದ ಇನ್ನೋರ್ವ ಪಾತ್ರಧಾರಿ ರಾಜ್ ಬಿ ಶೆಟ್ಟಿ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಿಕೊಳ್ಳುವ ಮೂಲಕ ಶುಭಾಶಯ ಕೋರಿದೆ.
ಇದನ್ನೂ ಓದಿ: ಸುಶಾಂತ್ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್ ಫಿಕ್ಸ್..
ಚಾರ್ಲಿ ಚಿತ್ರದಲ್ಲಿ ರಾಜ್ ಶೆಟ್ಟಿ, ಡಾ. ಅಶ್ವಿನ್ ಹೆಸರಿನ ಪಾತ್ರ ನಿಭಾಯಿಸಿದ್ದು, ಈಗಾಗಲೇ ಅವರ ಪಾತ್ರದ ಶೂಟಿಂಗ್ ಸಹ ಮುಕ್ತಾಯವಾಗಿದೆ. ಇನ್ನು ಈ ಚಿತ್ರದಲ್ಲಿ ದಾನಿಶ್ ಸೇಠ್, ಕರ್ಶನ್ ರಾಯ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದು ಹಂತದ ಚಿತ್ರೀಕರಣದಲ್ಲಿಯೂ ಅವರು ಭಾಗವಹಿಸಿದ್ದಾರೆ.
‘777 ಚಾರ್ಲಿ’ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿ ನಿರ್ವಿುಸುತ್ತಿದ್ದಾರೆ. ಕಿರಣ್ ರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಂಗೀತಾ ಶೃಂಗೇರಿ ರಕ್ಷಿತ್ಗೆ ಜೋಡಿಯಾಗಿದ್ದಾರೆ.