ಭಕ್ತರಿಗೆ ಗಾಂಜಾ ಮಾರುತ್ತಿದ್ದವನ ಬಂಧನ

17 HANUR 6
Published on

ಹನೂರು: ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡಕೆಹಳ್ಳದ ಬಳಿ ಶುಕ್ರವಾರ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳಿಗೆ ಒಣಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಸಲಾಗಿದೆ.


ಬಿಡದಿ ಸಮೀಪದ ಭೈರಮಂಗಲ ಗ್ರಾಮದ ಕುಮಾರ್ (26) ಬಂತ ಆರೋಪಿ. ಈತ ಮಧ್ಯಾಹ್ನ 3 ಗಂಟೆಯಲ್ಲಿ 5 ಗ್ರಾಂಗಲ ಒಣಗಾಂಜಾದ ಪ್ಯಾಕೆಟ್‌ಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಮಹದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಮಾರಾಟ ಮಾಡಲು ವಡಕೆಹಳ್ಳ ಗ್ರಾಮದ ನಿಂತಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ರಾಧಾ, ಮುಖ್ಯ ಪೇದೆಗಳಾದ ನಾಗೇಂದ್ರ, ಮಹೇಂದ್ರ ಕಾರ್ಯಾಚರಣೆ ನಡೆಸಿ ಬ್ಯಾಗ್ ಪರಿಶೀಲಿದಾಗ ಗಾಂಜಾ ಇರುವುದು ದೃಢಪಟ್ಟಿತು. ಆತನಿಂದ 135 ಗ್ರಾಂ ಗಾಂಜಾ ಹಾಗೂ 3,500 ರೂ.ಗಳನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net