ಕಿಕ್ಕೇರಿಯಲ್ಲಿ ಹನುಮಂತೋತ್ಸವ ಆಚರಣೆ

16kkr1(4-25 hanumanta utsava
ಕಿಕ್ಕೇರಿಯಲ್ಲಿ ವಿಪ್ರ ಬಾಂಧವ ಸಮಿತಿಯಿಂದ ಹನುಮಂತೋತ್ಸವ ಇತ್ತೀಚೆಗೆ ಜರುಗಿತು. ಅನಿಲ್‌ಶಾಸ್ತ್ರಿ, ನರಸಿಂಹ, ಮಹಬಲರಾವ್, ಮಹಾಬಲಶರ್ಮ, ರಘು, ಕೆ.ಎಸ್.ಪ್ರಭಾಕರ್, ಗಣೇಶರಾವ್, ಶ್ರೀಹರಿ, ಕೆ.ಎಸ್.ಪರಮೇಶ್ವರಯ್ಯ, ಕೆ.ಬಿ.ವೆಂಕಟೇಶ್, ಆದಿತ್ಯ, ಚಂದ್ರಶೇಖರಯ್ಯ ಮುಂತಾದವರು ಇದ್ದರು.
Published on

ಕಿಕ್ಕೇರಿ: ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿ ವತಿಯಿಂದ ಹನುಮಂತೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಆಚರಿಸಲಾಯಿತು.

ಶ್ರೀರಾಮನವಮಿ ಪ್ರಯುಕ್ತ ವಾರದವರೆಗೆ ನಿತ್ಯ ಪಟ್ಟಾಭಿರಾಮದೇವರ ಪೂಜೆ, ಉತ್ಸವ ಜರುಗಿತು. ಅಂತಿಮವಾಗಿ ಹನುಮ ದೇವರ ಉತ್ಸವ, ಓಕುಳಿ ಆಚರಣೆ ಮಾಡಲಾಯಿತು.

ಉತ್ಸವದ ಅಂಗವಾಗಿ ಹನುಮನ ಭಾವಚಿತ್ರವನ್ನು ಪುಷ್ಪಗಳಿಂದ ಅಲಂಕರಿಸಿ ಬ್ರಹ್ಮೇಶ್ವರ ಬೀದಿ, ಸುಬ್ಬರಾಯ ಛತ್ರ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮನೆ ಮನೆ ಮುಂದೆ ಬಣ್ಣದ ನೀರನ್ನು ಓಕುಳಿಗಾಗಿ ಇಡಲಾಗಿತ್ತು. ಉತ್ಸವದಲ್ಲಿ ಭಾಗವಹಿಸಿದ್ದ ಹಿರಿಯರು, ಮಕ್ಕಳು ಉತ್ಸಾಹದಿಂದ ಬಣ್ಣ ಬಳಿದುಕೊಂಡು, ಬಣ್ಣದ ನೀರಿನಿಂದ ಓಕುಳಿಯಾಡಿದರು.

ಒಬ್ಬರಿಗೊಬ್ಬರು ವಾನರರಿಗಿಂತ ತಾವು ಕಡಿಮೆ ಇಲ್ಲದಂತೆ ಪೈಪೋಟಿಯಲ್ಲಿ ಬಣ್ಣ ಮೆತ್ತಿಕೊಂಡಿದ್ದರು. ಹನುಮ ದೇವರಿಗೆ ಹೂ, ಹಣ್ಣು ಕಾಯಿ ಅರ್ಪಿಸಿ ಗ್ರಾಮಸ್ಥರು ಪೂಜಿಸಿದರು.

ಮುಖಂಡರಾದ ಅನಿಲ್‌ಶಾಸ್ತ್ರಿ, ಕೆ.ಬಿ.ವೆಂಕಟೇಶ್, ನರಸಿಂಹ, ಮಹಬಲರಾವ್, ಮಹಾಬಲಶರ್ಮ, ರಘು, ಕೆ.ಎಸ್.ಪ್ರಭಾಕರ್, ಗಣೇಶರಾವ್, ಶ್ರೀಹರಿ, ಕೆ.ಎಸ್.ಪರಮೇಶ್ವರಯ್ಯ, ಚಂದ್ರಶೇಖರಯ್ಯ, ಆದಿತ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net