

ಬೆಂಗಳೂರು: ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ 'ಹನು-ಮ್ಯಾನ್' ಸಿನಿಮಾ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಆದಾಯವನ್ನು ಗಳಿಸಿತು. ಸೂಪರ್ಹಿಟ್ ಚಿತ್ರವಾಗಿ ಹೊರಹೊಮ್ಮಿದ ನಟ ತೇಜ ಸಜ್ಜ ಅಭಿನಯದ ಈ ಸಿನಿಮಾ ಇದೀಗ ಒಟಿಟಿ ಪ್ಲಾಟ್ಫಾರ್ಮ್ಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಚಿತ್ರಮಂದಿರಗಳಲ್ಲಿ ಬಹುಪಾಲು ಯಶಸ್ಸು ಕಂಡ ಪ್ರಶಾಂತ್ ವರ್ಮಾ ನಿರ್ದೇಶನದ 'ಹನು-ಮ್ಯಾನ್' ಇದೇ ಮಾರ್ಚ್ 02ರಂದು ಜೀ5 ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲು ಮಿಸ್ ಮಾಡಿಕೊಂಡ ಸಿನಿಪ್ರಿಯರು, ಈಗ ಮನೆಯಲ್ಲೇ ಕುಳಿತು ಚಿತ್ರವನ್ನು ನೋಡಬಹುದಾಗಿದೆ.
ಚಿತ್ರದಲ್ಲಿ ಅಮೃತಾ ಅಯ್ಯರ್, ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್, ಗೆಟಪ್ ಶ್ರೀನು, ಸಮುದ್ರಕಣಿ, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ನಿರ್ಮಿಸಿದ್ದಾರೆ,(ಏಜೆನ್ಸೀಸ್).