ಮಣ್ಣಿನಿಗೆ ಹೊಂದಿಕೊಳ್ಳುವ ಬೆಳೆ ಬೆಳೆಯಿರಿ; ಡಾ. ಗುರುಪ್ರಸಾರ

11-RNR-03
Published on

ರಾಣೆಬೆನ್ನೂರ: ಇಡೀ ಜೀವ ಜಗತ್ತು ಮಣ್ಣಿನ ಶಕ್ತಿ ಮೇಲೆ ನಿಂತಿದೆ. ಆದ್ದರಿಂದ ಮಣ್ಣು ಸರಂಕ್ಷಣೆ ಜತೆಗೆ ಮಣ್ಣಿನ ಗುಣ ಧರ್ಮಕ್ಕೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದು ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ ಹೇಳಿದರು.
ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಮಣ್ಣಿನೊಂದಿಗೆ ಮಾತುಕತೆ ಎಂಬ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ತಾವು ಬಿತ್ತನೆ ಮಾಡುವ ಮುನ್ನ ಮಣ್ಣಿನ ಪರೀೆ ಮಾಡಿಸುವುದು ಬಹಳ ಮುಖ್ಯವಾಗಿದೆ. ಮಣ್ಣು ಪರೀೆ ನಂತರ ಆಯಾ ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆ ಬೆಳೆದರೆ ಉತ್ತಮ ಇಳುವರಿ ದೊರೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ಎಸ್​.ಡಿ. ಬಳಿಗಾರ, ಪಿ. ಶ್ರೀನಿವಾಸ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net