

Hansika Motwani : ನಟಿ ಹನ್ಸಿಕಾ ಮೋಟ್ವಾನಿ ಸಹೋದರ ಪ್ರಶಾಂತ್ ಪತ್ನಿ ಮುಸ್ಕಾನ್ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಲಿಸಿದ್ದಾರೆ. ಮುಸ್ಕಾನ್ ತನ್ನ ಇಡೀ ಕುಟುಂಬದೊಂದಿಗೆ ಹನ್ಸಿಕಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಮದುವೆ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಇದೀಗ ಪೊಲೀಸ್ ಕೇಸ್ ವಿಚಾರವಾಗಿ ಸುದ್ದಿ ಆಗಿದ್ದಾರೆ. ಅಣ್ಣನ ಹೆಂಡತಿಗೆ ನಟಿ ಹನ್ಸಿಕಾ ಕೊಡಬಾರದ ಕಿರುಕುಳ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹನ್ಸಿಕಾ ಸಹೋದರ ಪ್ರಶಾಂತ್ ಮತ್ತು ಮುಸ್ಕಾನ್ ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರು 2021ರಲ್ಲಿ ವಿವಾಹವಾದರು. ಆದರೆ ಈಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಹೀಗಾಗಿ ಇವರಿಬ್ಬರು ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಡಿಸೆಂಬರ್ 18 ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ನಟಿ ಹನ್ಸಿಕಾ ಹಾಗೂ ಅವರ ತಾಯಿ ನನ್ನ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸಿದ್ದು, ನನ್ನ ಹಾಗೂ ನನ್ನ ಗಂಡನ ನಡುವಿನ ಜಗಳಕ್ಕೆ ಇವರೇ ಕಾರಣ ಎಂದು ಆರೋಪಿಸಿದ್ದಾರೆ. ಹನ್ಸಿಕಾ ಕುಟುಂಬದ ವಿರುದ್ಧ ಮುಸ್ಕಾನ್ ಪ್ರಕರಣ ದಾಖಲಿಸಿದ್ದಾರೆ. ಹಲವು ದಿನಗಳಿಂದ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ಕೊಟ್ಟ ದೂರಿನ ಹಿನ್ನೆಲೆ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದು, ಎಫ್ಐಆರ್ ಕೂಡ ಹಾಕಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 498-A, 323, 504, 506 ಮತ್ತು 34 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಹನ್ಸಿಕಾ ಮೋಟ್ವಾನಿ ದೇಶಮುದುರು ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದರು. ಆ ನಂತರ ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಈಗ ಟಿವಿ ಶೋವೊಂದಕ್ಕೆ ತೀರ್ಪುಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.