ಪ್ರಮುಖ ಓಟಿಟಿಯಲ್ಲಿ ಬರುತ್ತಿದೆ ಚಂದ್ರಮುಖಿ- 2 ಸಿನಿಮಾ

chandramukhi 2
Published on

ಚೆನ್ನೈ: ರಾಘವ ಲಾರೆನ್ಸ್, ಕಂಗನಾ ರನೌತ್ ಪ್ರಧಾನ ಪಾತ್ರದಲ್ಲಿ ಪಿ.ವಾಸು ತೆರೆಗೆ ತಂದ ಚಂದ್ರಮುಖಿ 2 ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಹಾರರ್ ಸಿನಿಮಾವಾಗಿತ್ತು. ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದ ಅವತರಣಿಕೆಗಳನ್ನು ಒಳಗೊಂಡಿದ್ದ ಬಹುನಿರೀಕ್ಷಿತ ಚಂದ್ರಮುಖಿ ಕನ್ನಡದ ವಿಷ್ಣುವರ್ದನ್​ ಅವರ ಆಪ್ತಮಿತ್ರ, ತಮಿಳಿನ ರಜನಿಕಾಂತ್​ ಹಿಟ್​ ಸಿನಿಮಾ ಚಂದ್ರಮುಖಿಯ ಮುಂದುವರಿದ ಭಾಗವಾಗಿದ್ದು, ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಚಿತ್ರದ ಮೊದಲ ಶೋನಿಂದಲೇ ಡಿವೈಡ್ ಟಾಕ್​ ತಂದುಕೊಂಡಿತ್ತು.

ಇದರಿಂದ ಸಿನಿಮಾ ನೋಡಬೇಕೆಂದಿದ್ದವರೂ ಓಟಿಟಿಯಲ್ಲಿ ಬರುತ್ತೆ, ನೋಡೋಣ ಎಂದು ಸುಮ್ಮನಾಗಿದ್ದರು. ಹೀಗಾಗಿ ನಿರ್ಮಾಪಕರು 20ಕೋಟಿ ರೂ.ನಷ್ಟ ಹೊಂದಿದ್ದರು ಎನ್ನಲಾಗಿದೆ. ಥಿಯೇಟರ್​ಗಳಲ್ಲಿ ನಿರಾಸೆ ಮಾಡಿದ ಸಿನಿಮಾ ಅದರ OTT (ಓವರ್-ದಿ-ಟಾಪ್) ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಡಿಜಿಟಲ್ ಸ್ಟ್ರೀಮಿಂಗ್ ಬೆಹೆಮೊತ್, ನೆಟ್‌ಫ್ಲಿಕ್ಸ್, 8 ಕೋಟಿ ರೂ.ಗೆ ಹಕ್ಕುಗಳನ್ನು ಪಡೆದುಕೊಂಡಿದೆ. ಅ.27ಕ್ಕೆ OTTಯಲ್ಲಿ ಈ ಚಿತ್ರ ಬರುತ್ತಿದ್ದು, ಪ್ರೇಕ್ಷಕರನ್ನು ಯಾವ ರೀತಿ ಸೆಳೆಯಲಿದೆ ಎಂಬ ಕುತೂಹಲ ಮೂಡಿದೆ.

ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ನರ್ತಕಿಯಾಗಿ ನಟಿಸಿದ್ದಾರೆ, ರಾಘವ ಲಾರೆನ್ಸ್ ರಾಜನ ಪಾತ್ರ ನಿರ್ವಹಿಸಿದ್ದು, ಮಹಿಮಾ ನಂಬಿಯಾರ್​, ಲಕ್ಷ್ಮೀ ಮೆನನ್​, ಸುಭೀಕ್ಷಾ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಸ್ಕರ್​ ವಿನ್ನರ್​ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಓಟಿಟಿಯಲ್ಲಿ ಚಂದ್ರಮುಖಿ 2 ಯಾವ ರೀತಿ ಧೂಳೆಬ್ಬಿಸುತ್ತದೆಯೋ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net