ಹಂದಿಗುಂದ: ಹಂದಿಗುಂದ ಗ್ರಾಪಂಗೆ ಮುಂದಿನ ತಿಂಗಳಲ್ಲಿ 1.60 ಕೋಟಿ ರೂ. ವೆಚ್ಚದ ಕಾಮಗಾರಿ ಅನುಮೋದಿಸಿ, ಶ್ರೀ ಕಾಯಂ ಪಿಡಿಒ ನೇಮಿಸಲಾಗುವುದು ಎಂದು ರಾಯಬಾಗ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಅರುಣ ಮಾಚಕನೂರ ಹೇಳಿದರು.
ಗ್ರಾಮದ ಗ್ರಾಪಂ ಕಚೇರಿಗೆ ಗುರುವಾರ ಬೀಗ ಹಾಕಿದ ಟನೆಗೆ ಎಚ್ಚೆತ್ತು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಪಂ ಸದಸ್ಯರು, ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ರಾಯಬಾಗ ತಾಲೂಕಿನಲ್ಲಿ 38 ಗ್ರಾಮಗಳ ಪೈಕಿ 17 ಗ್ರಾಪಂಗಳ ನರೇಗಾ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಸಮನ್ವಯತೆಯ ಕೊರತೆಯಿಂದ ನರೇಗಾ ಯೋಜನೆಯ ರಸ್ತೆ ಕಾಮಗಾರಿಯ ಕೆಲವು ದತ್ತಾಂಶ ಹಾಗೂ ತಾಂತ್ರಿಕ ದೋಷದಿಂದಾಗಿ ಜಿಪಂಗೆ ಸಲ್ಲಿಸಲು ಸಾಧ್ಯವಾಗಿಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಂಬಂಧಿಸಿದ ಇಂಜಿನಿಯರ್, ಗುತ್ತಿಗೆದಾರರು ಗ್ರಾಮದ ಅಭಿವೃದಿಟಛಿಯ ವೇಗ ಹೆಚ್ಚಿಸಬೇಕು ಎಂದರು.
ಪಿಡಿಒ ಮಹಾದೇವ ಕುಂಬಾರ, ಗ್ರಾಪಂ ಉಪಾಧ್ಯ ಸಂಗಪ್ಪ ಮಿರ್ಜಿ, ಶಂಕರಗೌಡ ಪಾಟೀಲ, ವಿಶ್ವನಾಥ ಖಾನಗೌಡರ, ಮುತ್ತಪ್ಪ ತಳವಾರ, ವಿಠ್ಠಲ ಚಿನಗುಂಡಿ, ಮಹಾಲಿಂಗಪ್ಪ ಬೆಳಗಲಿ, ಕಾರ್ಯದರ್ಶಿ ಸಿದಾಟಛಿರೂಢ ದಳವಾಯಿ, ಮಹಾದೇವ ಹೆಗ್ಗಾಣಿ, ಕಾರ್ಯದರ್ಶಿ ರಮೇಶ ಪಾಟೀಲ, ಮಹಾದೇವ ಬನಾಜ, ಶಂಕರ ಬುರ್ಜಿ, ಶಂಕರ ಗುಂಜಟ್ಟಿ, ಕುಮಾರ ಹಿರೇಮಠ, ರಮೇಶ ಗಂಗಪಗೋಳ, ಲ್ಮಣ ಜಗದಾಳ, ಮಹಾದೇವ ಮಂಟೂರ, ಕಾಶಿಂಸಾಬ ನದಾ, ಮಹಾದೇವ ಕೊಣ್ಯಾಗೋಳ, ಗುತ್ತಿಗೆದಾರ ಯಲ್ಲಪ್ಪ ವಡ್ಡರ, ಬಸವರಾಜ ಅಜ್ಜಪ್ಪಗೋಳ ಇತರರು ಇದ್ದರು