

ಬೆಂಗಳೂರು: ನಗರದ ಹುಳಿಮಾವುನಲ್ಲಿರುವ ತೋಟಗಾರಿಕೆ ಇಲಾಖೆ ಜೈವಿಕ ಕೇಂದ್ರವು ಸೆ.2ರಂದು ಕೈತೋಟ ಮತ್ತು ತಾರಸಿ ತೋಟ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರೈತರು ಸೇರಿದಂತೆ ಸಾರ್ವಜನಿಕರು, ನಗರವಾಸಿಗಳು ಹಾಗೂ ವಿದ್ಯಾರ್ಥಿಗಳು ಕೈತೋಟ ಮತ್ತು ತಾರಸಿ ತೋಟ ತರಬೇತಿಯಲ್ಲಿ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ತರಬೇತಿ ದಿನದಂದು 250 ರೂ. ಶುಲ್ಕವನ್ನು ಜೈವಿಕ ಕೇಂದ್ರದ ಕಚೇರಿಯಲ್ಲಿ ಪಾವತಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449833153, 9066764248 ಅಥವಾ
sadh.co2014@gmail.com, jaivikakendra.hulimavu@gmail.com ಭೇಟಿ ನೀಡಬಹುದು ಎಂದು ಹಿರಿಯ ಹುಳಿಮಾವು ಜೈವಿಕ ಕೇಂದ್ರದ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.