ಅತ್ಯಾಚಾರ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಿ

manavi
ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಮನುಗೆ ಮನವಿ ಸಲ್ಲಿಸಿದರು. ಸಂತೋಷ್, ಅಂಬಳೆ ಕುಮಾರ್, ಲಕ್ಷ್ಮಣ್ ಇತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಗುಂಡುಹಾರಿಸಿ ಕೊಲೆ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಮನು ಮೂಲಕ ಡಿಸಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ತೋಟದ ಮಾಲೀಕರ ಮಗ ಮತ್ತು 11 ಮಂದಿ ಸೇರಿ ಕೂಲಿ ಕಾರ್ಮಿಕ ಜಯಮ್ಮ ಎಂಬುವವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ತೋಟದಿಂದ 2 ಕಿ.ಮೀ. ದೂರದಲ್ಲಿ ಸುಟ್ಟ ಹಾಕಿದ್ದಾರೆ. ತೋಟದ ಮಾಲೀಕರ ಕುಟುಂಬದವರನ್ನು ಬಂಧಿಸಿ ಚರ್ಚಿಸಿ ನಂತರ ಅದೇ ತೋಟದ ಕೂಲಿ ಕಾರ್ಮಿಕನಿಗೆ ಹಣದ ಆಸೆ ತೋರಿಸಿ ಆತನ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದು ಆರೋಪಿಸಿದರು.
ತೋಟದ ಮಾಲೀಕನ ಮಗ ಅಥವಾ ಕುಟುಂಬದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಬೆಂಬಲಿಸಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು. ಭಯದಿಂದ ಬದುಕುತ್ತಿರುವ ಕೂಲಿ ಕಾರ್ಮಿಕರಿಗೆ ರಕ್ಷಣೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಸದಸ್ಯರಾದ ಅಂಬಳೆ ಕುಮಾರ್, ಲಕ್ಷ್ಮಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net