ಬೆಳ್ತಂಗಡಿಯ ಇಳಂತಿಲದಲ್ಲಿ 40 ವರ್ಷ ಹಿಂದಿನ ಹ್ಯಾಂಡ್ ಗ್ರೆನೇಡ್ ಪತ್ತೆ

IMG-20211107-WA0011
Published on

ಮಂಗಳೂರು: ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಗುಡ್ಡದಲ್ಲಿ ಶನಿವಾರ ಸಾಯಂಕಾಲ ಐದು ಹ್ಯಾಂಡ್ ಗೆನೇಡ್ ಪತ್ತೆಯಾಗಿದೆ. ಇವು 40 ವರ್ಷ ಹಿಂದಿನ ಗ್ರೆನೇಡ್ ಎಂದು ತಿಳಿದು ಬಂದಿದೆ.
ಗ್ರಾಮದ ನಿವಾಸಿ ನಿವೃತ್ತ ಯೋಧ ಜಯಕುಮಾರ್ ಎನ್ನುವವರು ಸಾಯಂಕಾಲ 6 ಗಂಟೆ ವೇಳೆಗೆ ತಮ್ಮ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಗುಡ್ಡದ ಇಳಿಜಾರಿನಲ್ಲಿ ಸ್ಫೋಟಕ ವಸ್ತುವಾಗಿರುವ ಹ್ಯಾಂಡ್ ಗೆನೇಡ್ ಕಂಡು ಬಂದಿದೆ. ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಗ್ರೆನೇಡ್ ಇದ್ದರೆ ಇತರ ನಾಲ್ಕು ಸ್ಥಳದಲ್ಲಿ ಹರಡಿಕೊಂಡಿತ್ತು. ಈ ಕುರಿತಂತೆ ದೂರು ನೀಡಿರುವ ಅವರು, ದಾರಿ ಬದಿಯಲ್ಲಿ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಜಯ ಕುಮಾರ್ ಅವರು, ಭೂ ಸೇನಾ ರೆಜಿಮೆಂಟ್‌ನಲ್ಲಿ ಎಸ್‌ಸಿಒ ಆಗಿ ನಿವೃತ್ತಿ ಹೊಂದಿದ್ದು, ಅವರು ಗ್ರೆನೇಡ್ ಎಂದು ಕಂಡು ಕೊಂಡಿದ್ದಾರೆ. ಅವುಗಳನ್ನು ಕಚ್ಚಿ ಪ್ರಾಣಿಗಳು ಬೇರೆಕಡೆಗೆ ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ ಎಂದು ಅರಿತ ಅವರು, ಅದನ್ನು ಮನೆಗೆ ತಂದು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು, ಗ್ರೆನೇಡ್‌ಗಳು ತುಕ್ಕು ಹಿಡಿದಿದ್ದು, ಸುಮಾರು 40 ವರ್ಷ ಹಿಂದಿನವು ಎಂದು ತಿಳಿದು ಬಂದಿದೆ. ಇಳಂತಿಲಕ್ಕೆ ಇದು ಹೇಗೆ ಬಂದು ಎಂದು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net