ಹಾನಗಲ್ಲ ಗುರುಕುಮಾರೇಶ್ವರ ಸ್ವಾಮೀಜಿ ಸೇವೆ ಉತ್ತಮ; ಶಿವಲಿಂಗ ಸ್ವಾಮೀಜಿ

2-RNR-03
Published on

ರಾಣೆಬೆನ್ನೂರ: ಪವಾಡ ಪುರುಷ, ಆಧ್ಯಾತ್ಮಿಕ ತತ್ವಜ್ಞಾನಿ ಅಂಧಕಾರದ ಸಮಾಜವನ್ನು ಬೆಳಕಿನಡೆಗೆ ಕೊಂಡೊಯ್ದ ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಜನಿಸಿದ ಈ ಜಿಲ್ಲೆಯಲ್ಲಿ ಜನಿಸಿದ ನಾವುಗಳು ಪುಣ್ಯವಂತರು ಎಂದು ರಟ್ಟಿಹಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ ಹಾನಗಲ್ಲ ಗುರುಕುಮಾರ ಶಿವಯೋಗಿಗಳವರ 158 ನೇ ಜಯಂತಿ ಮಹೋತ್ಸವ ಹಾಗೂ 5ನೇ ವರ್ಷದ ಮಹಾರಥೋತ್ಸವ ನಿಮಿತ್ತ ಶನಿವಾರ ಸಂಜೆ ಏರ್ಪಡಿಸಿದ್ದ ಶ್ರೀ ಕುಮಾರೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾನಗಲ್ಲ ಗುರುಕುಮಾರ ಸ್ವಾಮೀಜಿಯವರು ಮಠ ಮತ್ತು ಮಠಾಧೀಶರು ಹೇಗಿರಬೇಕು ಎಂಬ ಚೌಕಟ್ಟನ್ನು ಹಾಕಿಕೊಟ್ಟವರು. ಬ್ರಿಟಿಷರ ಕಾಲದಲ್ಲೇ ಮಹಿಳೆಯರಿಗೆ ಪ್ರತ್ಯೇಕ ಶಾಲೆ ತೆರೆದ ಆಧ್ಯಾತ್ಮಿಕ ಜತೆ ವೈಚಾರಿಕತೆಯನ್ನು ರೂಢಿಸಿಕೊಂಡಿದ್ದ ಹಾನಗಲ್ಲ ಶ್ರೀ ಗುರುಕುಮಾರ ಶಿವಯೋಗಿಗಳು ಈ ಜಗತ್ತಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಅವರ ಜಯಂತಿ ನಿಮಿತ್ತ 45 ದಿನಗಳ ಕಾಲ ನಡೆಯುವ ಪ್ರವಚನ ಮತ್ತು ಶ್ರೀ ಕುಮಾರೇಶ್ವರ ಜ್ಯೋತಿ ರಥಯಾತ್ರೆಯ ಎಲ್ಲ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದರು.

ಹೊಳಲು ವಿರಕ್ತಮಠದ ಚೆನ್ನಬಸವ ದೇವರು, ಬೆಳಗಾವಿ ಕಾರಂಜಿ ಮಠದ ಡಾ. ಶಿವಯೋಗಿ ದೇವರು ಸಾನ್ನಿಧ್ಯ ವಹಿಸಿದ್ದರು. ನಂತರ ಕುಮಾರೇಶ್ವರರ ಜ್ಯೋತಿ ರಥಯಾತ್ರೆ ಜೋಹಿಸರಹರಳಹಳ್ಳಿ, ಎರೇಕುಪ್ಪಿ ಸೇರಿ ಪ್ರಮುಖ ಗ್ರಾಮಗಳ ಬೀದಿಗಳಲ್ಲಿ ಸಂಚರಿಸಿತು.

ರೈತ ಮುಖಂಡ ರವೀಂದ್ರಗೌಡ ಪಾಟೀಲ, ಹೇಮರಡ್ಡಿ ದಬಲಪರ, ಶಿವಲಿಂಗಯ್ಯ ಮಠದ, ಗೋವಿಂದಪ್ಪ ಹಳ್ಳಿ, ಭೀಮಪ್ಪ ಕಗನಾಳ, ಚನ್ನಪ್ಪ ಗೌಡ್ರ, ನಾಗಯ್ಯ ಮಠದ, ರುದ್ರಪ್ಪ ಹಾದಿಮನಿ, ರಂಗಪ್ಪ ಕಡ್ಲಿಗೊಂದಿ, ಗದಿಗೆಪ್ಪ ಬಣಕಾರ, ಹನುಮಂತಪ್ಪ ಸಾದರ, ಜಗದೀಶ ದಾಸರಡ್ಡಿ, ಸೋಮರಡ್ಡಿ ಮೈದೂರು, ರಂಗಪ್ಪ ಸಾದರ, ಕೃಣ್ಣಪ್ಪ ಗೌಡರ, ಸಿದ್ದಪ್ಪ ಸಾದರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net