ಹೊಸಪೇಟೆ: ಹಂಪಿ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಆದಿತ್ಯ ಪ್ರಜಾಪತಿ(20) ಎಂಬ ಪ್ರವಾಸಿಗ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾನೆ.
ಮಹಾರಾಷ್ಟçದ ಕೊಲ್ಲಾಪುರ ನಿವಾಸಿ ಕ್ಯಾಲಿ ಕುಮಾರ ಪ್ರಜಾಪ್ರತಿ ಎಂಬುವವರ ಮಗನಾದ ಆದಿತ್ಯ ದೀಪಾವಳಿ ಹಬ್ಬದ ಪ್ರಯುಕ್ತ ರಜೆ ಇರುವ ಹಿನ್ನಲೆಯಲ್ಲಿ ತಮ್ಮ ಕುಟುಂಬದೊಂದಿಗೆ ಹಂಪಿಗೆ ಪ್ರವಾಸಕ್ಕೆ ಆಗಮಿಸಿದ್ದ. ಆದರೆ, ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದಾನೆ.
ಈ ಕುರಿತು ನಾಪತ್ತೆಯಾದ ಯುವಕನ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.