ಹಂಪಿ ಉತ್ಸವದಲ್ಲಿ ಬಾನಂಗಳದಿಂದ ನೋಡಿ ಹಂಪಿ ಶಿಲ್ಪಕಲಾ ಸಾಮ್ರಾಜ್ಯ

Hampi Utsav 2025 Hampi By-Sky
ಕಮಲಾಪುರದಲ್ಲಿ ಆಕಾಶದತ್ತ ಹೆಲಿಕಾಪ್ಟರ್ ಹಾರುತ್ತಿರುವುದು.
Published on

ಹಂಪಿ: ಪ್ರತಿ ವರ್ಷದಂತೆ ಈಸಲವು ವರ್ಷವೂ ಹಂಪಿ ಉತ್ಸವ ವೈಭವ ಕಣ್ತುಂಬಿ ಕೊಳ್ಳಲು ಹಂಪಿ ಬೈ-ಸ್ಕೈ ಸೌಲಭ್ಯ ಕಲ್ಪಿಸಿದ್ದು, ಜನರು ಬಾನಂಗಳದಲ್ಲಿ ಹಾರಾಡುತ್ತ ಹಂಪಿ ವೈಭವ ಕಣ್ತುಂಬಿಕೊಂಡರು.

ಬೆಳಗ್ಗೆ ಒಂಬತ್ತಕ್ಕೆ ಆರಂಭವಾಗಬೇಕಿದ್ದ ಬೈ-ಸ್ಕೈ ತಡವಾಗಿ ಕಾರ್ಯಾಚರಣೆ ಮಾಡಿತು. ಉದ್ಘಾಟನೆ ಸಮಯ ಹಲವು ಬಾರಿ ಬದಲಾ ಯಿತು. ಮೊದಲ ದಿನ ಒಂದೇ ಹೆಲಿಕಾಪ್ಟರ್ ಮಧ್ಯಾಹ್ನ ಎರಡಕ್ಕೆ ಆಗಮಿಸಿತು. ಮೊದಲ ದಿನವೇ ಹಂಪಿ ಸ್ಮಾರಕಗಳನ್ನು ಬಾನಂಗಳದಿಂದ ಕಣ್ತುಂಬಿಕೊಳ್ಳಲು ಹೆಸರು ನೋಂದಾಯಿಸಿ ಕಾದು ನಿಂತವರಿಗೆ ನಿರಾಸೆಯಾಯಿತು.

ಎಂಟತ್ತು ಟ್ರಿಪ್ ಮಾತ್ರ ಹೆಲಿಕಾಪ್ಟರ್ ಹಾರಾಟ ನಡೆಯಿತು. ಒಂದು ಬಾರಿಗೆ ನಾಲ್ವರಷ್ಟೇ ಹೋಗಿ ಬರಲು ಅವಕಾಶ ದೊರೆಯಿತು. ಈ ಬಾರಿ ಪ್ರತಿಯೊಬ್ಬರಿಗೆ ನಾಲ್ಕು ಸಾವಿರ ರೂ. ದರ ನಿಗದಿಪಡಿಸಲಾಗಿದೆ. ಒಂದು ಬಾರಿಗೆ ನಾಲ್ಕೈದು ನಿಮಿಷ ಕಾಲ ಬಾನಂಗಳದಲ್ಲಿ ಹಕ್ಕಿಯಂತೆ ವಿಹರಿಸಲು ಅವಕಾಶವಿದೆ.

ವಿಜಯನಗರ ಸಾಮ್ರಾಜ್ಯದ ಹತ್ತಾರು ಸ್ಮಾರಕಗಳನ್ನು ಆಗಸದಿಂದ ಕಣ್ತುಂಬಿಕೊಳ್ಳಬಹುದು. ಹಂಪಿ, ಆನೆಗೊಂದಿ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಮಾತಂಗ ಪರ್ವತ ಇತರ ಪ್ರದೇಶಗಳನ್ನು ವೀಕ್ಷಿಸ ಬಹುದಾಗಿದೆ. ಇಂದು ಇನ್ನೊಂದು ಹೆಲಿಕಾಪ್ಟರ್ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಯುವಿಹಾರ ಮಾಡಲು ಅವಕಾಶ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net