ಹಮಾಸ್ ಪ್ರಧಾನ ಕಚೇರಿ ಕತಾರ್‌ನಿಂದ ಸ್ಥಳಾಂತರ? ಕಾರಣ ಇದೇ ನೋಡಿ..

hamas ...
Published on

ಟೆಲ್ ಅವೀವ್ (ಇಸ್ರೇಲ್): ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿ ಬಳಿಕ ಗಾಜಾಪಟ್ಟಿ ಮೇಲೆ ಸಾರಿದ ಯುದ್ಧದಲ್ಲಿ ಅಕ್ಷರಷಃ ಸ್ಮಶಾನದಂತಾಗಿರುವುದರ ಜೊತೆಗೆ ಜೀವ ಉಳಿಸಿಕೊಳ್ಳಲು ಹೆಣಗುತ್ತಿರುವ ಹಮಾಸ್ ಉಗ್ರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಅಮೆರಿಕಾ ಕಾಂಗ್ರೆಸ್‌ ಸದಸ್ಯರಿಂದ ಟೀಕೆಗಳು ಹೆಚ್ಚುತ್ತಿರುವ ಕಾರಣ ಹಮಾಸ್‌ನ ರಾಜಕೀಯ ವಿಭಾಗವು ತನ್ನ ಪ್ರಧಾನ ಕಚೇರಿಯನ್ನು ಕತಾರ್‌ನಿಂದ ಹೊರಗೆ ಸ್ಥಳಾಂತರಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ವರದಿಯಾಗಿದೆ. ಅವರು ಮುಂದೆ ಎಲ್ಲಿಗೆ ಹೋಗುತ್ತಾರೆ? ಎಂಬುದು ಈಗ ಕುತೂಹಲ ಮೂಡಿದೆ.

ಹಮಾಸ್ ನಾಯಕರು ಒಮಾನ್ ಮತ್ತು ಇನ್ನೂ ಒಂದು ರಾಷ್ಟ್ರದೊಂದಿಗೆ ಈ ಸಂಬಂಧ ಚರ್ಚೆಯಲ್ಲಿ ತೊಡಗಿದೆ ಎನ್ನಲಾಗುತ್ತಿದೆ. ಆದರೆ ಪ್ಯಾಲೆಸ್ತೇನ್​ ಚಳವಳಿಯು ಕತಾರ್‌ನಿಂದ ಹೊರಹೋಗುತ್ತಿದೆ ಎಂಬ ವರದಿಯನ್ನು ಹಮಾಸ್​ ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net