50 ಒತ್ತೆಯಾಳುಗಳನ್ನು ಅಮಾನುಷವಾಗಿ ಕೊಂದ ಹಮಾಸ್!

Israel
Published on

ಜೆರುಸಲೇಮ್(ಇಸ್ರೇಲ್) ಹಮಾಸ್​ ಉಗ್ರರ ವಿರುದ್ಧ ಇಸ್ರೇಲ್ ಸಾರಿರುವ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಯುದ್ಧ ಕಾರಣದಿಂದ 7 ಸಾವಿರಕ್ಕೂ ಅಧಿಕ ಮಂದಿ ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಆದರೆ ಇಷ್ಟಾದರೂ ಪಾಠ ಕಲಿಯದ ಹಮಾಸ್​ ಮತ್ತೊಂದು ಭೀಬತ್ಸ್ಯ ಕೃತ್ಯ ಎಸಗಿದೆ. 50ಕ್ಕೂ ಹೆಚ್ಚು ಇಸ್ರೇಲ್​ನ ಒತ್ತೆಯಾಳುಗಳನ್ನು ಅಮಾನುಷವಾಗಿ ಕೊಲೆ ಮಾಡಿದ್ದು, ಇಸ್ರೇಲ್​ ದಾಳಿ ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.

ಗಾಜಾಪಟ್ಟಿ ಮೇಲೆ ಇಸ್ರೇಲ್​ ನಿರಂತರವಾಗಿ ವಾಯುಧಾಳಿ ಮಾಡುತ್ತಿರುವುದರಿಂದ ನಾವು 50 ಒತ್ತೆಯಾಳುಗಳನ್ನು ಕೊಂದಿದ್ದೇವೆ ಎಂದು ಹಮಾಸ್ ಭಯೋತ್ಪಾದಕರು ಹೇಳಿಕೊಂಡಿದ್ದಾರೆ. ನಮ್ಮವರು, ನಮ್ಮ ಯುದ್ಧ ಟ್ಯಾಂಕರ್, ಸ್ಫೋಟಕ ವಸ್ತುಗಳು ಸೇರಿದಂತೆ ಗಾಜಾದೆಲ್ಲೆಡೆ ಇಸ್ರೇಲ್​ ಬಾಂಬ್ ಹಾಕಿ ನಾಶ ಮಾಡಿದೆ. ಇದಕ್ಕೆ ಪ್ರತೀಕಾರವಾಗಿ ಈ ಇಸ್ರೇಲಿಗರನ್ನು ಬಲಿ ಪಡೆದಿದ್ದೇವೆ ಎಂದು ಭಯೋತ್ಪಾದಕರು ತಿಳಿಸಿರುವುದಾಗಿ ಹೇಳಲಾಗಿದೆ.

ಗಾಜಾದಲ್ಲಿ 7,028 ಜನ ಮೃತಪಟ್ಟಿದ್ದಾರೆ ಎಂದು ಹಮಾಸ್​ನ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಹಮಾಸ್ ಅ.7ರ ದಾಳಿ ನಂತರ 1,400 ಇಸ್ರೇಲಿಗರನ್ನು ಹತ್ಯೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net