

ಹಸುಗೂಸಿರುವುದರಿಂದ ನನ್ನ ಪತ್ನಿ ಮನೆ ಬಿಟ್ಟು ಹೊರಹೋಗಲಾರಳು, ಆದ್ದರಿಂದ ನಾನೇ ಎಲ್ಲವನ್ನೂ ಮಾಡಬೇಕಿದೆ.
You see, I only have to do everything as my wife is housebound with a suckling.
ವಯಸ್ಕರು ಹಾಗೂ ಬಲಹೀನರಿಗೆ ಅಗತ್ಯವಿರುವಾಗೆಲ್ಲ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ.
It’s our bounden duty to help the weak and elderly people when they need it.
ಬಚ್ಚಲಿನ ನಲ್ಲಿಯಲ್ಲಿ ನೀರು ಸೋರುತ್ತಿತ್ತು ಮತ್ತು ಸಂಡಾಸಿನ ಕಮೋಡಿನ ಒಳಭಾಗ ಒಡೆದಿದ್ದು ಕಪ್ಪು ಕಲೆಗಳಿದ್ದವು.
A tap in the bathroom was leaking and the toilet bowl was cracked and stained.
ನಾನು ನಿಮ್ಮ ಬೂಟುಗಳನ್ನು ಪೆಟ್ಟಿಗೆಯಲ್ಲಿ ಕಟ್ಟಲೆ ಅಥವಾ ನೀವು ಅವುಗಳನ್ನು ಧರಿಸುವಿರಾ?
Shall I box these shoes or do you wear them?
ತನ್ನ 30 ವರ್ಷದ ವಾಹನ ಚಾಲನೆಯಲ್ಲಿ ಒಮ್ಮೆಯೂ ಅಪಘಾತವಾಗಿಲ್ಲ ಎಂದು ಆತ ಜಂಬ ಕೊಚ್ಚಿಕೊಂಡ.
He bragged that he never had an accident in his 30 years experience as a driver.
ಬಾಡಿಗೆ, ಸಂಬಳ, ಬಡ್ಡಿ, ಪ್ರಯಾಣ ಇತ್ಯಾದಿಗಳಿಗೆ ಎಷ್ಟು ಖರ್ಚಾಗುವುದೆಂದು ಬೇರೆ ಬೇರೆಯಾಗಿ ಬರೆಯಿರಿ, ನಿಮ್ಮ ಮುಖ್ಯ ಖರ್ಚಿನ ದಾರಿ ತಿಳಿಯುತ್ತದೆ.
Break your expenses down into rent, salary, interest, travelling expenses etc. so that you will know which the main overhead is.