ಅರ್ಧ ಹಾಸಿಗೆ ಬಾಡಿಗೆಗೆ ಇದೆ!…ಈ ‘ಡೀಲ್’ ಓಕೆ ಆದ್ರೆ ಷರತ್ತುಗಳು ಅನ್ವಯ

Half a bed is for rent woman charges rupees 75 thousand rent to share her bed in Toronto
Published on

ಕೆನಡಾ: ಮನೆ, ಜಾಗ, ಬಟ್ಟೆ ಅಂಗಡಿ ಬಾಡಿಗೆ ಕೊಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ತಾನು ಮಲಗುವ ಹಾಸಿಗೆಯ ಅರ್ಧ ಭಾಗವನ್ನು ಬಾಡಿಗೆ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

ಮಹಿಳೆಯೊಬ್ಬಳು ತಾನು ಮಲಗುವ ಹಾಸಿಗೆಯ ಅರ್ಧ ಭಾಗವನ್ನು ಬಾಡಿಗೆಗೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾಳೆ. ಜತೆಗೆ ಅರ್ಧ ಹಾಸಿಗೆಯ ಬಾಡಿಗೆ ಹಾಗೂ ಆಕೆ ಹಾಕಿರುವ ಕೆಲವು ಶರತ್ತುಗಳನ್ನು ಕೇಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ.

ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿರುವ ಈ ಯುವತಿಯ ಹೆಸರು ಅನ್ಯಾ ಎಟ್ಟಿಂಗರ್. ಡೈಲಿ ಸ್ಟಾರ್ ಪ್ರಕಾರ, ಅನ್ಯಾ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಹಾಸಿಗೆಯ ಅರ್ಧ ಭಾಗವನ್ನು ಮಾರಾಟ ಮಾಡುವುದಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.ಈ ವೀಡಿಯೋದಲ್ಲಿ ತಾನು ‘ಬೆಡ್‌ಮೇಟ್’ಗಾಗಿ ಹುಡುಕುತ್ತಿದ್ದೇನೆ. ಟೊರೊಂಟೊ ಅತ್ಯಂತ ದುಬಾರಿ ನಗರವಾದ್ದರಿಂದ ನನ್ನ ಮನೆಯ ಬಾಡಿಗೆಯನ್ನು ಕಟ್ಟಲು ಕಷ್ಟ ಪಡುತ್ತಿದ್ದೇನೆ. ಅದಕ್ಕಾಗಿಯೇ ಬೆಡ್‌ಮೇಟ್ ನ್ನು ಹುಡುಕುತ್ತಿದ್ದೇನೆ, ನನ್ನೊಂದಿಗೆ ಹಾಸಿಗೆಯ ಮೇಲೆ ಮಲಗಬಹುದು ಎಂದು ಹೇಳಿಕೊಂಡಿದ್ದಾಳೆ.

ತನ್ನ ಹಾಸಿಗೆಯನ್ನು ಬಾಡಿಗೆಗೆ ನೀಡಲು ಮೊದಲ ಷರತ್ತು ತನ್ನ ‘ಬೆಡ್‌ಮೇಟ್’ ಹುಡುಗಿಯಾಗಿರಬೇಕು. ಅವಳು ತನ್ನೊಂದಿಗೆ ಕನಿಷ್ಠ ಒಂದು ವರ್ಷ ಇರಬೇಕು. ಇದಲ್ಲದೇ ತಿಂಗಳಿಗೆ ಅರ್ಧ ಭಾಗ ಹಾಸಿಗೆಗೆ 75,000 ರೂ. ಬಾಡಿಗೆಯನ್ನು ನೀಡಬೇಕು ಎಂದು ಹೇಳಿಕೊಂಡಿದ್ದಾಳೆ. ಈ ‘ಡೀಲ್’ ಓಕೆ, ಇಷ್ಟೊಂದು ಹಣನಾ? ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net