ದೊಡ್ಡನಹುಂಡಿಯಲ್ಲಿ ಹಾಲರವಿ ಉತ್ಸವ

IMG-20241101-WA0153
ದೊಡ್ಡನಹುಂಡಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಹಾಲರಿವೆ ಉತ್ಸವ.
Published on

ತಿ.ನರಸೀಪುರ : ತಾಲೂಕಿನ ದೊಡ್ಡನಹುಂಡಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ದೀಪಾವಳಿ ಅಮಾವಾಸ್ಯೆ ಪೂಜೆ, ಹಾಲರವಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಹದೇಶ್ವರ ದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ ಹಾಗೂ ಪೂಜೆ ನೆರವೇರಿದವು. ಬೆಳಗ್ಗೆ 10.30ಕ್ಕೆ ಗ್ರಾಮದ ಮಧ್ಯದಲ್ಲಿರುವ ಬಾವಿಯಲ್ಲಿ ಗಂಗಾಪೂಜೆ ನೆರವೇರಿಸಿ ನಂತರ ಮಂಗಳವಾದ್ಯ, ಸುಮಂಗಲಿಯರ ಕಳಸ ಹಾಗೂ ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ದೇಗುಲಕ್ಕೆ ಆಗಮಿಸಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಯೆ ಏರ್ಪಡಿಸಲಾಗಿತ್ತು.

ಮೆರವಣಿಗೆಯಲ್ಲಿ ಮಹದೇಶ್ವರ ದೇಗುಲದ ಅರ್ಚಕ ಪ್ರಭುಸ್ವಾಮಿ, ಕುಂತೂರು ವೀರ ಸಿಂಹಾಸನ ಪೀಠಾಧ್ಯಕ್ಷ ಶ್ರೀ ಶಿವಪ್ರಭು ಸ್ವಾಮೀಜಿ, ತೇರಂಬಳ್ಳಿ ಮಠದ ಶ್ರೀ ಲಿಂಗರಾಜಸ್ವಾಮೀಜಿ, ನಾಡಗೌಡ ಜಿ.ಸ್ವಾಮಿ, ಗ್ರಾಮದ ಮುಖಂಡರಾದ ಬಸವರಾಜು, ಮಹದೇವಸ್ವಾಮಿ ನಂದೀಶ್(ಸಂತೋಷ್), ಅಭಿಷೇಕ್, ಮಹಾನಿರಂಜನ್ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net