ವಚನ ಸಾಹಿತ್ಯದ ಪಿತಾಮಹ ಹಳಕಟ್ಟಿ

dr.halakatti birthaday
ಕುವೆಂಪು ರಂಗಮಂದಿರದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ಡಾ. ಫ.ಗು.ಹಳಕಟ್ಟಿ ಅವರ ಜನ್ಮದಿನವನ್ನು ಸಾಹಿತಿ ಬಿ.ತಿಪ್ಪೇರುದ್ರಪ್ಪ ಉದ್ಘಾಟಿಸಿದರು. ಎಚ್.ಉಮೇಶ್, ಎಂ.ಎನ್.ಸುಂದರರಾಜ್, ಜಿ.ಬೆನಕಪ್ಪ, ರುದ್ರಮುನಿ ಸಜ್ಜನ್, ಜಿ.ವಿಜಯಕುಮಾರ್, ರುದ್ರಾರಾಧ್ಯ, ಮಹೇಶ್ ಮೂರ್ತಿ ಇದ್ದರು.
Published on

ಶಿವಮೊಗ್ಗ: ವಚನಗಳ ಸಂರಕ್ಷಣೆ ಬಗ್ಗೆ ಮಠ, ಮಂದಿರಗಳು ಎಚ್ಚರ ವಹಿಸಲೇ ಇಲ್ಲ. ಅವುಗಳ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ. 13ರಿಂದ 20ನೇ ಶತಮಾನದವರೆಗೂ ಅಜ್ಞಾತ ವಾಸದಲ್ಲಿದ್ದ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ ಕೀರ್ತಿ ನಿಜಶರಣ ಡಾ. ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮಗಳೂರಿನ ಬಿ.ತಿಪ್ಪೇರುದ್ರಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಮತ್ತು ಡಾ. ಫ.ಗು.ಹಳಕಟ್ಟಿ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯಕ್ಕೆ ಪುನಶ್ಚೇತನ ನೀಡಿದ ಕೀರ್ತಿ ಮತ್ತು ವಚನ ಸಂರಕ್ಷಣೆ ಮಾಡಿದ ಶ್ರೇಯಸ್ಸು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರು ವಚನ ಸಾಹಿತ್ಯದ ಪಿತಾಮಹ ಎಂದೆನಿಸಿಕೊಂಡಿದ್ದಾರೆ. 12ನೇ ಶತಮಾನದಲ್ಲಿ ಅಂಧಕಾರ, ಅನಾಚಾರ, ಮೂಢನಂಬಿಕೆ, ಜಾತಿ ವ್ಯವಸ್ಥೆ, ಮಹಿಳಾ ಶೋಷಣೆ ಇದ್ದ ಸಂದರ್ಭದಲ್ಲಿಯೇ ವಚನ ಸಾಹಿತ್ಯ ಇತ್ತು. ಆದರೆ ವಚನಗಳನ್ನು ಸಂರಕ್ಷಿಸಬೇಕು ಎಂಬ ಅರಿವು ಯಾರಲ್ಲೂ ಇರಲಿಲ್ಲ. ಹಾಗಾಗಿ ಹಲವು ಶತಮಾನಗಳವರೆಗೆ ವಚನ ಸಾಹಿತ್ಯ ಅಜ್ಞಾನದಿಂದ ಕೂಡಿತ್ತು. ವಚನ ಸಾಹಿತ್ಯಕ್ಕಾಗಿ ಹಳಕಟ್ಟಿ ಬಹಳ ಕಷ್ಟಪಟ್ಟಿದ್ದರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಪ್ರಸ್ತಾವಿಕ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಜಿ.ವಿಜಯಕುಮಾರ್, ರುದ್ರಾರಾಧ್ಯ, ಮಹೇಶ್ ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net