ಪತಿಯಿಂದ ಪತ್ನಿ ಪ್ರೀಯಕರನ ಬರ್ಬರ ಕೊಲೆ

IMG-20241012-WA0041
Published on

ಹಗರಿಬೊಮ್ಮನಹಳ್ಳಿ : ಹಾಡಹಗಲೇ ಪತ್ನಿಯ ಪ್ರಿಯಕರನನ್ನು ಕೊಡಲಿಯಿಂದ ಪತಿ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಚಿಲುಗೋಡು ಗ್ರಾಮದಲ್ಲಿ ಶನಿವಾರ ನಡೆದಿದೆ.

ಆನಂದಳ್ಳಿ ಬಸವರಾಜ್ (26) ಕೊಲೆಯಾದ ಯುವಕ. ಅದೇ ಗ್ರಾಮದ ಬಸರ್ ಕೋಡ್ ಫಕೀರಸ್ವಾಮಿ ಕೊಲೆ ಮಾಡಿದವನು. ಪಕೀರಸ್ವಾಮಿ ತನ್ನ ಹೆಂಡತಿ ಮಿಸ್ ಆಗಿದ್ದಾಳೆ ಎಂದು ಹತ್ತಿರದ ಪೊಲೀಸ್ ಠಾಣೆ ತಂಬ್ರಹಳ್ಳಿಯಲ್ಲಿ ಮೂರು ತಿಂಗಳ ಹಿಂದೆ ದೂರು ದಾಖಲಿಸಿದ್ದರು. ಪೊಲೀಸರ ಪ್ರಯತ್ನದಿಂದ ಕಾಣೆಯಾಗಿದ್ದ ಪತ್ನಿ ಮತ್ತು ಪ್ರಿಯಕರ ಆನಂದಳ್ಳಿ ಬಸವರಾಜ್ ಅವರನ್ನು ಪತ್ತೆ ಮಾಡಿ, ಗ್ರಾಮಸ್ಥರ ಸಮ್ಮುಖದಲ್ಲಿ ಒಪ್ಪಿಸಿದ್ದರು. ಅಂದಿನಿಂದ ಗ್ರಾಮದಲ್ಲಿ ಕಾಣದ ಆನಂದಳ್ಳಿ ಬಸವರಾಜ್ ಇತ್ತೀಚಿಗೆ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ.

ಇವರಿಬ್ಬರ ನಡುವೆ ಪತ್ನಿ ಮತ್ತು ಪ್ರಿಯಕರನ ಅನೈತಿಕ ಸಂಬಂಧ ಮುಂದುವರೆದಿದೆ ಎಂದು ಶಂಕಿಸಿ ಫಕೀರಸ್ವಾಮಿ ಗ್ರಾಮದ ವೀರಯೋಧ ಬಡಿಗೇರ್ ಮೌನೇಶನ ಪುತ್ಥಳಿ ಮುಂದೆ ಕೊಡಲಿಯಿಂದ ಆನಂದಳ್ಳಿ ಬಸವರಾಜನ ತಲೆಗೆ ಮತ್ತು ಕುತ್ತಿಗೆ ಬಲವಾಗಿ ಹೊಡೆದು ಬರ್ಬರಹತ್ಯೆ ಮಾಡಿದ್ದಾನೆ. ಬಳಿಕ ತಂಬ್ರಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಕುರಿತು ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net