

ಹಗರಿಬೊಮ್ಮನಹಳ್ಳಿ: ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಾಲೂಕು ಕುರುಬರ ಸಂಘ ಪಟ್ಟಣದ ತಹಸಿಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿತು.
ಕುರುಬ ಸಮಾಜ ಸಂಘದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಆದೇಶದ ಮೇರೆಗೆ ಪಟ್ಟಣದ ಕನಕ ಭವನದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಸಮುದಾಯದ ಎಲ್ಲರೂ ಶಾಂತರೀತಿಯಲ್ಲಿ ಹಕ್ಕೊತ್ತಾಯದ ಮನವಿಯನ್ನು ಸಿಎಂ ಬಸವರಾಜ ಬೊಮ್ಮಯಿಗೆ ತಹಸೀಲ್ದಾರ್ ಮೂಲಕ ಸಲ್ಲಿಸಲಾಗಿದೆ. 1950ರಲ್ಲಿ ಕಾಡು ಕುರುಬ, ಜೇನು ಕುರುಬ ಹೆಸರಿನ ಜಾತಿಗೆ ಎಸ್ಟಿ ಮೀಸಲಾತಿ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ಆದರೂ ಎಸ್ಟಿ ಮೀಸಲಾತಿ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಶೀಘ್ರವೇ ರಾಜ್ಯ ಸರ್ಕಾರ ಕುರುಬ ಸಮುದಾಯದವರ ಬೇಡಿಕೆಯನ್ನು ಈಡೇರಿಸಬೇಕು. ನಿರ್ಲಕ್ಷ್ಯ ಧೋರಣೆ ಸಮುದಾಯ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಉಪತಹಸೀಲ್ದಾರ್ ವಿಶ್ವೇಶ್ವರಯ್ಯ ಮತ್ತು ಅನ್ನದಾನೇಶ್ವರಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಉಲುವತ್ತಿ ಸೋಮಲಿಂಗಪ್ಪ, ಮುಟುಗನಹಳ್ಳಿ ಕೊಟ್ರೇಶ್, ಬಣಕಾರ ಗೋಣೆಪ್ಪ, ಕೆ.ಮೈಲಾರಪ್ಪ, ಸದ್ಯೋಜಾತಪ್ಪ, ಹಾಳ್ಯಾದ ಚನ್ನಬಸಪ್ಪ, ಕೆ.ರಾಮಲಿಂಗಪ್ಪ, ಚಿಂತ್ರಪಳ್ಳಿ ರಾಮಣ್ಣ, ಸೊನ್ನದ ಮಹೇಶ್, ಹುಡೇದ್ ಹುಲುಗಪ್ಪ, ಡಾಬಾ ರಾಮಣ್ಣ, ಐ.ಸೋಮಶೇಖರ್, ಆಂಜನೇಯ, ಎಂ.ವೆಂಕಟೇಶ್, ಮಧುಸೂಧನ, ಎಚ್.ಚಂದ್ರಶೇಖರ್, ಕೆ.ದೇವರಾಜ, ಪರಶುರಾಮ, ದುರುಗಪ್ಪ, ಕೊಟ್ರೇಶಪ್ಪ, ರವಿ, ಪ್ರಕಾಶ್, ಭೀಮಪ್ಪ, ಸಣ್ಣ ನಿಂಗಪ್ಪ, ಕೆ.ದೊಡ್ಡಬಸಪ್ಪ, ಬ್ಯಾಸಿಗಿದೇರಿ ಮಂಜುನಾಥ, ಕೋಗಳಿ ಹನುಮಂತಪ್ಪ, ಪ್ರಕಾಶ್, ಪ್ರಭಾಕರ ಇತರರಿದ್ದರು.