

bigg-boss : ಎಲ್ಲೆಲ್ಲೂ ಬಿಗ್ ಬಾಸ್ ಕಾರ್ಯಕ್ರಮದ ಸುದ್ದಿ ಬಹಳ ಜೋರಾಗಿ ಕೇಳಿ ಬರುತ್ತಿದೆ. ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್, ಕನ್ನಡ, ಹಿಂದಿ, ತೆಲುಗಿನಲ್ಲಿ ಶುರುವಾಗಲು ತಯಾರಿ ಆರಂಭಿಸಿದೆ. ಇನ್ನೇನು ದಿನಾಂಕ ಕೂಡ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ನಡುವೆ ಬಿಗ್ ಬಾಸ್ ಕುರಿತ ಹೊಸ ಅಪ್ಡೇಟ್ವೊಂದು ಸಿಕ್ಕಿದ್ದು, ಇದು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಇನ್ನೂ ಈ ಬಾರಿಯ ಹಿಂದಿ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಹಬುಬು ಡಾಲ್, ಅಂದರೆ ಎಐ ಗೊಂಬೆ (ಕೃತಕಬುದ್ದಿಮತ್ತೆಯ ಗೊಂಬೆ) ಎಂಟ್ರಿ ನೀಡಲಿದೆಯಂತೆ. ಯುಎಇ ಮೂಲದ ಈ ರೊಬೋಟ್ ಆರಕ್ಕೂ ಹೆಚ್ಚು ಭಾಷೆ ಮಾತಾಡುತ್ತಂತೆ. ಭಾವನೆಗಳಿಗೂ ಸ್ಪಂದನೆ ನೀಡುತ್ತಂತೆ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಟ ಸಲ್ಮಾಂ ಖಾನ್ ನಡೆಸಿಕೊಡುತ್ತಿದ್ದಾರೆ. ಹಾಗಾಗಿ ಈ ಸಲ ಈ ರೊಬೋಟ್ ಹಿಂದಿ ಬಿಗ್ ಬಾಸ್ ನಲ್ಲಿ ಮಿಂಚಲಿದ್ದು ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡುವ ಉದ್ದೇಶವನ್ನು ಹೊಂದಿದೆ.
ಕಳೆದ ಹಿಂದಿ ಬಿಗ್ ಬಾಸ್ ಸೀಸನ್ನಲ್ಲಿ ಮನೆಯೊಳಗೆ ಕತ್ತೆಯನ್ನು ಬಿಡಲಾಗಿತ್ತು. ಈ ಮೂಲಕ ವಿಶಿಷ್ಠವಾದ ಪ್ರಯತ್ನವನ್ನು ಕೂಡ ಮಾಡಲಾಗಿತ್ತು. ಈ ಹಿನ್ನೆಲೆ ಈ ಬಾರಿ ಎಐ ರೋಬೋಟ್ ಕಳಿಹಿಸಿದರು ಕೂಡ ಅಚ್ಚರಿ ಇಲ್ಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇಂತಹ ಒಂದು ಪ್ರಯತ್ನ ಕನ್ನಡ ಬಿಗ್ ಬಾಸ್ನಲ್ಲೂ ನಡೆದರೆ ನೋಡುಗರಿಗೆ ಸಖತ್ ಮಜಾ ಇರುವುದರಲ್ಲಿ ಅನುಮಾನವಿಲ್ಲ.
(ಏಜೆನ್ಸೀಸ್)