

ಮ್ಯಾಡ್ರಿಡ್: ಲಿವರ್‌ಪೂಲ್ ಫುಟ್‌ಬಾಲ್ ಆಟಗಾರ ಡಿಯೋಗೊ ಜೋಟಾ ಇಂದು (ಜೂ.03) ಸ್ಪೇನ್‌ನ ಝಮೋರಾ ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಜೋಟಾ ಕಳೆದ 10 ದಿನಗಳ ಹಿಂದೆ ತನ್ನ ಗೆಳತಿ ರೂಟ್ ಕಾರ್ಡೋಸೊ ಅವರನ್ನು ವಿವಾಹವಾದರು. ಜೋಟಾ ಅವರ ಸಹೋದರ ಆಂಡ್ರೆ ಕೂಡ ವೃತ್ತಿಪರ ಫುಟ್ಬಾಲ್ ಆಟಗಾರರಾಗಿದ್ದರು. ಅವರು ಪೋರ್ಚುಗೀಸ್ 2 ನೇ ಲೀಗ್‌ನಲ್ಲಿ ಪೆನಾಫಿಯೆಲ್ಅನ್ನು ಪ್ರತಿನಿಧಿಸುತ್ತಿದ್ದರು ಮತ್ತು ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದರು ಎನ್ನಲಾಗಿದೆ. ಇನ್ನೂ ಇಬ್ಬರೂ ಸಹೋದರರು ಲ್ಯಾಂಬೋರ್ಘಿನಿಯೊಳಗೆ ಇದ್ದರು, ಓವರ್‌ಟೇಕ್ ಮಾಡುವಾಗ ಟೈರ್ ಸ್ಫೋಟಗೊಂಡ ಕಾರಣ ಕಾರು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಸ್ಪೇನ್‌ನ ಸನಾಬ್ರಿಯಾದ ಝಮೋರಾ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಪೋರ್ಚುಗೀಸ್ ಅಂತಾರಾಷ್ಟ್ರೀಯ ಆಟಗಾರ ಪೋರ್ಚುಗಲ್‌ನ ಪೆನಾಫಿಯೆಲ್‌ನ ವೃತ್ತಿಪರ ಫುಟ್‌ಬಾಲ್ ಆಟಗಾರನಾಗಿರುವ ತನ್ನ ಸಹೋದರ ಅಂಡ್ರೆ ಸಿಲ್ವಾ ಅವರೊಂದಿಗೆ ಪ್ರಯಾಣಿಸುತ್ತಿದ್ದರು ಅವರು ಕೂಡ ನಿಧನರಾಗಿದ್ದಾರೆ.
(ಏಜೆನ್ಸೀಸ್)
ಜೋಟಾ 2020 ರಲ್ಲಿ ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್‌ನಿಂದ ಆನ್‌ಫೀಲ್ಡ್‌ಗೆ ಆಗಮಿಸಿದರು. ಎಲ್ಲಾ ಸ್ಪರ್ಧೆಗಳಲ್ಲಿ ಕ್ಲಬ್‌ಗಾಗಿ 182 ಪಂದ್ಯಗಳಲ್ಲಿ 65 ಗೋಲುಗಳನ್ನು ಗಳಿಸಿದರು. ಅವರು ಪೋರ್ಚುಗಲ್ ಪರ 49 ಪಂದ್ಯಗಳನ್ನು ಆಡಿದ್ದರು, ಎರಡು ಬಾರಿ UEFA ನೇಷನ್ಸ್ ಲೀಗ್ ಗೆದ್ದುಕೊಂಡಿದ್ದರು.
ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಜೋಟಾ ಜೊತೆಗೆ ಆಂಡ್ರೆ ಸಿಲ್ವಾ ಕೂಡ ನಿಧನರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.